ಉಜಿರೆ.“ ಮದ್ಯವ್ಯಸನಿ ಎಂದರೆ ಮದ್ಯದ ಅಮಲಿಗೆ ದಾಸರಾದವರು. ವ್ಯಸನವುದೈಹಿಕ, ಸಾಮಾಜಿಕ ಮತ್ತು ಆರ್ಥಿಕ ಹಾನಿಯನ್ನುಂಟು ಮಾಡುವ ಸಮಸ್ಯೆಯಾಗಿದೆ. ಯಾವ ಕುಟುಂಬದಲ್ಲಿ ವ್ಯಸನವೆಂಬ ಚಟ ಇದೆಯೋ ಅ ಕುಟುಂಬದಲ್ಲಿ ಸಾಂಸಾರಿಕವಾದ ಸಂಬಂಧಗಳು ಸರಿ ಇರುವುದಿಲ್ಲ.


ಕುಟುಂಬದಲ್ಲಿ ಕಲಹ, ವಿಚ್ಛೇದನ ಮತ್ತು ಸಂಬಂಧಗಳ ಹದಗೆಡುವಿಕೆಗೆ ಕಾರಣವಾಗುತ್ತದೆ. ಕುಟುಂಬದವರು ಪ್ರೀತಿಯಿಂದ ವಂಚಿತರಾಗುತ್ತಾರೆ. ವ್ಯಸನಿಯು ತನ್ನ ಕುಟುಂಬಕ್ಕೆ ಖರ್ಚು ಮಾಡುವ ಮತ್ತು ಪ್ರೀತಿತೋರಿಸುವ ಬದಲು ತನ್ನ ಸ್ನೇಹಿತರಿಗೆ ಹೆಚ್ಚು ಖರ್ಚು ಮತ್ತು ಪ್ರೀತಿ ಮಾಡುತ್ತಾನೆ. ಮದ್ಯಪಾನಕ್ಕೆ ಬಲಿಯಾದವರನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿವರ್ತನೆ ಮಾಡುವಂತಹ ಕಾರ್ಯಕ್ರಮವೇ ಈ ಮದ್ಯವರ್ಜನ ಶಿಬಿರ. ಆದುದರಿಂದ ದುಶ್ಚಟ ಬಿಟ್ಟುಎಲ್ಲರೂ ಆರೋಗ್ಯವಂತ ಜೀವನವನ್ನು ನಡೆಸಿರಿ’ಎಂದು ಶ್ರೀ ಕ್ಷೇತ್ರಧರ್ಮಸ್ಥಳ ಧರ್ಮಾಧಿಕಾರಿಗಳಾದ ಪರಮ ಪೂಜ್ಯಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 264ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿರಾ ಜ್ಯಾದ್ಯಂತ ಆಗಮಿಸಿದ 54 ಮಂದಿ ಶಿಬಿರಾರ್ಥಿಯವರನ್ನು ಉದ್ದೇಶಿಸಿ ಮಾರ್ಗದರ್ಶನ ನೀಡಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದಅನಿಲ್ ಕುಮಾರ್‍ಎಸ್.ಎಸ್.ರವರು ಮನಸ್ಸು ಮತ್ತು ಆತ್ಮಗಳ ಉದಾಹರಣೆ ಮೂಲಕ ಮಾತನಾಡುತ್ತಾ“ಮನುಷ್ಯನಿಗೆ ಭಗವಂತ ಹುಟ್ಟುವಾಗಲೇ ವಿವೇಚನಾ ಶಕ್ತಿಯನ್ನುಕೊಟ್ಟಿದ್ದಾನೆ. ಉಳಿದ ಜೀವರಾಶಿಗಳಿಗೆ ಈ ಶಕ್ತಿಯನ್ನು ನೀಡಿರುವುದಿಲ್ಲ. ಮನುಷ್ಯನಿಗೆಯಾವುದು ಒಳ್ಳೆಯದು, ಯಾವುದು ಕೆಟ್ಟದು ಎನ್ನುವುದುಗೊತ್ತಿದೆ. ಮದ್ಯಪಾನ ಮಾಡುವುದು ತಪ್ಪು. ವ್ಯಸನದಿಂದ ಹೊರಬರಲು ಮಾನಸಿಕ ಸ್ಥೈರ್ಯ ತುಂಬುವುದು ಅಥವಾ ಹೆಚ್ಚಿಸುವ ವ್ಯವಸ್ಥೆಯೇಜನ ಜಾಗೃತಿ ವೇದಿಕೆಯ ಈ ಮದ್ಯವರ್ಜನ ಶಿಬಿರ”ಎಂದು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್ ಆರ್ ಪೈ, ಪೂಜ್ಯರ ಆಪ್ತ ಕಾರ್ಯದರ್ಶಿಗಳಾದ ವೀರು ಶೆಟ್ಟಿಯವರು, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾೈಸ್, ಆಡಳಿತ ಯೋಜನಾಧಿಕಾರಿಗಳಾದ ಮಾಧವ ಗೌಡ, ಶಿಬಿರಾಧಿಕಾರಿಯವರು, ಆರೋಗ್ಯ ಸಹಾಯಕರು ಮತ್ತು ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್ ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರವು ಫೆ. 16 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
