ಪಣಿಯಾಡಿ ನೆನಪು: ಬೋಳೂರಿನಲ್ಲೊಂದು ಚಿಂತನೆ ಮತ್ತು ಕವಿಗೋಷ್ಟಿ

ಮಂಗಳೂರು, ಎಪ್ರಿಲ್ 05: ತುಳುವರು ತಮ್ಮ ನಾಡು ನುಡಿ, ಸಾಹಿತ್ಯ ಸಂಸ್ಕೃತಿಗಳ ಕುರಿತಾಗಿ ಎಸ್. ಯು. ಪಣಿಯಾಡಿ ಹಾಕಿಕೊಟ್ಟ ತುಳುವ ನಾಡು ನುಡಿಯ ಬಗ್ಗೆ ಚಳುವಳಿಯ ಆಶಯಗಳನ್ನು ಅರಿತು ಕೊಳ್ಳಬೇಕು ಎಂದು ಹಿರಿಯ ತುಳು ಅಕಾಡೆಮಿ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಾಹಿತಿ ಮತ್ತು ಪತ್ರಕರ್ತ ಯಶವಂತ ಬೋಳುರು ನುಡಿದರು. ಅವರು ತುಳು ಚಳುವಳದ ನೇತಾರ ಸಾಹಿತಿ ಎಸ್. ಯು. ಪಣಿಯಾಡಿಯವರ ಜನ್ಮದಿನದ ನೆನಪಿನಲ್ಲಿ ಮಂಗಳೂರಿನ ಕವಿ ಮಿತ್ರರು ಸುಲ್ತಾನ ಬತ್ತೇರಿಯ ಬೋಳುರು ಬೇ ನಲ್ಲಿ ನಡೆದ ಪಣಿಯಾಡಿ ನೆನಪು ಮತ್ತು ತುಳು ಕವಿಗೋಷ್ಠಿ ಯಲ್ಲಿ ಮಾತನಾಡಿದರು.

ಪಣಿಯಾಡಿ ಅವರ ಬದುಕು ಮತ್ತು ಬರಹಗಳು ಹಾಗೂ ಅವರ ಕಾಲಮಾನದ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊಫೆಸರ್ ಕೃಷ್ಣಮೂರ್ತಿ ಅವರು ಸವಿವರವಾಗಿ ಮಾತನಾಡಿದರು.
ಸಾಹಿತಿ ರಘು ಇಡ್ಕಿದು ಅವರು ತುಳುವ ಸಾಹಿತ್ಯ ಮಾಲೆ ಯಲ್ಲಿ ಪ್ರಕಟವಾಗಿದ್ದ ನಾರಾಯಣ ಕಿಲ್ಲೆ ಯವರ ಕಾನಿಗೆ ಕವನ ಸಂಕಲನದ ತುಳುನಾಡ್ ಕವನ ಹಾಗು ಮಾಧವ ತಿಂಗಳಾಯರ ಜನ ಮರ್ಲ್ ನಾಟಕದ ಮಂಗಲ ಪದ್ಯ ವಾಚಿಸಿ ಪಣಿ ಯಾಡಿ ಯವರ ಕಾಲಘಟ್ಟದ ಸ್ವಾತಂತ್ರ್ಯ ಪೂರ್ವದ ತುಳು ಸಾಹಿತ್ಯದ ರುಚಿಯನ್ನು ಸಾಹಿತ್ಯ ಆಸಕ್ತರಿಗೆ ಉಣ ಬಡಿಸಿದರು.

ಯಶವಂತ ಬೋಳೂರ್ ಅವರು ‘ತುಳುನಾಡು’, ರೇಮಂಡ್ ಡಿಕೂನಾ ತಾಕೊಡೆ ‘ದೂರುನ ಅಭ್ಯಾಸ’ , ಸುಧಾನಾಗೇಶ್ ‘ಮದೆಕ್ ಪೋತುoಡು’, ವೆಂಕಟೇಶ್ ಗಟ್ಟಿ ‘ ನಮ ತುಳುವೆರ್ ‘, ಗೀತಾ ಲಕ್ಷ್ಮೀಶ್ ಅವರು ಎಸ್ ಯು ಪನಿಯಾಡಿ ಕುರಿತ ‘ಕನ ನನ ಆವೊಡು’, ಮಾಲತಿ ಶೆಟ್ಟಿ ಮಾಣೂರು ‘ ಪೆರ್ಮೆ’, ಎನ್ ಸುಬ್ರಾಯ ಭಟ್’ ಉಲ್ಲೆರಪ್ಪಾ ಉಲ್ಲೆರ್ ‘, ರಘು ಇಡ್ಕಿದು ಪಣಿಯಾಡಿ ಕಾಲದಲ್ಲಿ ಮುದ್ರಣ ಗೊಂಡ ನಾರಾಯಣ ಶೆಟ್ಟಿ ಕಿಲ್ಲೆ ಅವರ ‘ಕಾನಿಗೆ’ಕವನ ಸಂಕಲನದಿಂದ ಆಯ್ದ ಕವಿತೆಗಳನ್ನು ಪ್ರಸ್ತುತಪಡಿಸಿದರು. ಡಾ. ಸುರೇಶ ನೆಗಳಗುಳಿಯವರು ಪಣಿಯಾಡಿ ಕುರಿತ ಕವಿತೆ ಮತ್ತು ತುಳು ಗಜಲ್ ಗಳನ್ನು ವಾಚಿಸಿದರು.

Leave a Reply

Your email address will not be published. Required fields are marked *