ಕ್ರಿಯೇಟಿವ್ ಕಾಲೇಜಿನಲ್ಲಿ ‘ಡಿಟೆಕ್ಟಿವ್ ದಿವಾಕರ್’ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭ

ಕಾರ್ಕಳ: ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿಬರುತ್ತದೆ ಅದೇ  ‘ಡಿಟೆಕ್ಟಿವ್ ದಿವಾಕರ್’.

ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ದಿನಾಂಕ: 28- 03- 2026 ಶನಿವಾರ ನೆರವೇರಿತು.

ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾಕ್ಟರ್ ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಅಶ್ವತ್ ಎಸ್.ಎಲ್. ರವರು “ಈ ಚಲನಚಿತ್ರವು ಒಂದು ಹೊಸ ಕಥಾ ಹಂದರವನಿಟ್ಟುಕೊಂಡು ನಿರ್ಮಾಣವಾಗಿದ್ದು ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ಮತ್ತೆ ನೆನಪಿಸುವ, ರಹಸ್ಯಗಳನ್ನು ಅನಾವರಣಗೊಳಿಸುವ ಈ ಕಥೆ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡಲಿದೆ”. ಎಂದು ತಿಳಿಸುತ್ತಾ  ಶುಭ ಹಾರೈಸಿದರು.

ವೇದಿಕೆಯಲ್ಲಿ ರವೀಂದ್ರ ಶೆಟ್ಟಿ ಬಜಗೋಳಿ, ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್ ಎಸ್ .ಎಲ್., ಅಮೃತ್ ಯು .ರೈ ಎನ್.ಪಿ . ಮೀಡಿಯಾದ ಮುಖ್ಯಸ್ಥರಾದ ವಾಸುದೇವ ಭಟ್, ಸಂದೀಪ್ ಎನ್, ಅವಿನಾಶ್ ಶೆಟ್ಟಿ (ಅಮ್ಮ ಚಾರಿಟೇಬಲ್ ಟ್ರಸ್ಟ್), ರಮಾನಂದ (ನಿರ್ದೇಶಕರು) ಡಾಕ್ಟರ್ ಸಂತೋಷ್ ಕುಮಾರ್ ಶೆಟ್ಟಿ, ಸುನೀಲ್ ಕಡ್ತಲ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಲೋಹಿತ್ ನಡೆಸಿಕೊಟ್ಟರು.

 ಚಿತ್ರತಂಡದ ಪರಿಚಯ

ನಿರ್ಮಾಪಕರು : ಅಮೃತ್ ಯು. ರೈ. ಮತ್ತು ಸುನೀಲ್ ಶೆಟ್ಟಿ

ಸಹ ನಿರ್ಮಾಣ : ವಿಭಾ ಪ್ರೊಡಕ್ಷನ್

ಕಥೆ ಮತ್ತು ನಿರ್ದೇಶನ : ಸುನೀಲ್ ಕಡ್ತಲ

ಸಹಾಯಕ ನಿರ್ದೇಶಕರು: ವಿನೀಷ ಪೂಜಾರಿ, ಸಾಯಿನಾಥ್ ಪೆರ್ಡೂರು

ಛಾಯಾಗ್ರಹಣ : ಸಂತೋಷ್ ಕುಲಾಲ್

ಸಂಗೀತ : ಕಾರ್ತಿಕ್ ಮುಲ್ಕಿ, ಪ್ರವೀಣ್

ಸಂಕಲನ : ಗಗನ್ ಡಿ, ಪ್ರವೀಣ್ ಜಾರ್ಕಾಳ, ಪ್ರಜ್ವಲಿ ಸುವರ್ಣ

ವಸ್ತ್ರಲಂಕಾರ : ದರ್ಶಿತ್ ಭಂಡಾರಿ

ಪಬ್ಲಿಸಿಟಿ ಡಿಸೈನ್ : ಇನ್ಸ್ಪೈರ್ ಕ್ರಿಯೇಶನ್.

Leave a Reply

Your email address will not be published. Required fields are marked *