ಉಡುಪಿ, (ಅಕ್ಟೋಬರ್ 12): ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಾದ ತಾಲೂಕು ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳಕ್ಕೆ ಕೋವಿಡ್ ಹತೋಟಿ ಹಿನ್ನೆಲೆಯಲ್ಲಿ ತೆರವಾಗಿರುವ ಶುಶ್ರೂಷಕರ 29 ಹುದ್ದೆ, ಪ್ರಯೋಗಶಾಲಾ ತಂತ್ರಜ್ಞರ 45 ಹುದ್ದೆ ಹಾಗೂ ಗ್ರೂಪ್ ಡಿ 29 ಹುದ್ದೆಗಳನ್ನು 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲು ಅರ್ಜಿ  ಆಹ್ವಾನಿಸಲಾಗಿದೆ.

    ಅರ್ಜಿಯನ್ನು ಅಕ್ಟೋಬರ್ 15 ರ ಒಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ, ಅಜ್ಜರಕಾಡು, ಉಡುಪಿ ಇವರಿಗೆ ಸಲ್ಲಿಸಿ, ಅಕ್ಟೋಬರ್ 19 ರಂದು ಬೆಳಗ್ಗೆ 10.30 ಕ್ಕೆ ನಡೆಯುವ ಸಂದರ್ಶನದಲ್ಲಿ ವಿದ್ಯಾರ್ಹತೆ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಪ್ರಕಟಣೆ ತಿಳಿಸಿದೆ.