ಮಂಗಳೂರು (ಅಕ್ಟೋಬರ್ 09):- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ಘಟಕಗಳ ನೋಂದಣಿ ಬಗ್ಗೆ ಪ್ರಸಕ್ತ ಸಾಲಿನ ಜುಲೈ 1 ರಿಂದ ಉದ್ಯಮ ನೋಂದಣಿ ಚಾಲ್ತಿಯಲ್ಲಿದ್ದು, https://udyamregistration.gov.in ಲಿಂಕ್‍ನ್ನು ಬಳಸಿ ಆನ್‍ಲೈನ್‍ನಲ್ಲಿ ಉದ್ಯಮ ನೋಂದಣಿ ಪ್ರಮಾಣ ಪತ್ರ ಪಡೆಯಬಹುದಾಗಿದ್ದು, ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೈಗಾರಿಕಾ ಘಟಕಗಳು ಉದ್ಯಮ ನೋಂದಣಿ ಮಾಡುಬೇಕು. ಹಿಂದೆ ಪಡೆದ ಉದ್ಯೋಗ್ ಆಧಾರ್, SSI Registration Certificate ನೋಂದಣಿಗೆ ಇನ್ನು ಮುಂದೆ ಮಾನ್ಯತೆ ಇರುವುದಿಲ್ಲ. ಆದ್ದರಿಂದ ಎಲ್ಲಾ ಕೈಗಾರಿಕೋದ್ಯಮಿಗಳು ಹೊಸದಾಗಿ ಉದ್ಯಮ ರಿಜಿಸ್ಟ್ರೇಶನ್ ಮಾಡಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕರ ಪ್ರಕಟಣೆ ತಿಳಿಸಿದೆ.