ಲಂಡನ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನ್ನಿಸ್ ಮಹಿಳಾ ಸಿಂಗಲ್ಸ್‌ ಫೈನಲ್ ಪ್ರವೇಶಿಸುವ ಮೂಲಕ ಆಶ್ಲೆ ಬಾರ್ಟಿ ಅವರು 41 ವರುಷಗಳ ಬಳಿಕ ಆಸ್ಟ್ರೇಲಿಯಾದ ಮಹಿಳೆ ಒಬ್ಬರು ವಿಂಬಲ್ಡನ್ ಫೈನಲ್ ಪ್ರವೇಶಿಸಿದ ದಾಖಲೆ ಬರೆದರು.

ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಬಾರ್ಟಿಯವರು ಹಿಂದಿನ ಚಾಂಪಿಯನ್ ಆಂಜೆಲಿಕ್ ಕೆರ್ಬರ್ ಅವರನ್ನು ಮಣಿಸಿದರು. 1980ರಲ್ಲಿ ಆಸ್ಟ್ರೇಲಿಯಾದ ಇಮುಲೇಟ್‌ ಎವೋನ್ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.