ಪುತ್ತೂರು: ದೇಶವನ್ನು ಪರಕೀಯರಿಂದ ಕಾಪಾಡುವ ಸೈನಿಕರಪರಾ ಕ್ರಮ, ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಅವರಿಗೆ ಗೌರವ ಅರ್ಪಿಸಲು ಹಾಗೂ ಅವರ ಕುಟುಂಬಕ್ಕೆ ಪ್ರೋತ್ಸಾಹ ನೀಡಲು 19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶತ್ ಶತ್ ನಮನ್ಎಂಬ ವಿಶೇಷ ಕಾರ್ಯಕ್ರಮವನ್ನು ಹವಾಲ್ದಾರ್  ದಿ |ಪರಮೇಶ್ವರ ಕೆ ಇವರ ಸ್ವಗೃಹದಲ್ಲಿ ಆಯೋಜಿಸಲಾಯಿತು. 

ಪುತ್ತೂರು ತಾಲೂಕು ದೋಲ್ಪಾಡಿ ಗ್ರಾಮದ ಕಟ್ಟಿ ನಿವಾಸಿ ದಿ| ಲಿಂಗಪ್ಪಗೌಡ ಹಾಗೂ ಚೋಮಕ್ಕೆ ದಂಪತಿಗಳ ದ್ವಿತೀಯ ಪುತ್ರರಾದ  ಪರಮೇಶ್ವರ ಗೌಡ ಇವರು ದೋಲ್ಪಾಡಿ, ಚಾರ್ವಾಕ ಹಾಗೂ ಕೊಂಬೆಟ್ಟಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ವಿದ್ಯಾರ್ಥಿ ದೆಸೆಯಲ್ಲಿಯೇ ಎನ್. ಸಿ. ಸಿ. ಗೆಸೇರಿ ಎನ್. ಸಿ. ಸಿ. ಸೀನಿಯರ್ ಆಗಿದ್ದ ಇವರಿಗೆ ದೇಶ ಸೇವೆಯ ಬಗ್ಗೆ ಅದಮ್ಯ ಆಸಕ್ತಿ. 27-01-1983 ರಂದು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನ (ಎಮ್. ಇ. ಜಿ.) 40ನೇ ಫೀಲ್ಡ್ ಕಂಪೆನಿಯ ಯೋಧರಾಗಿ ಭಾರತೀಯ ಭೂಸೇನೆಯಲ್ಲಿ ಸೇರ್ಪಡೆಗೊಳ್ಳುವ ಮೂಲಕ ಅವರ ಕನಸು ಸಾಕಾರಗೊಂಡಿತು. 

19 ವರ್ಷಗಳ ಹಿಂದೆ ಭೂಸೇನೆಗೆ ಸೇರ್ಪಡೆಗೊಂಡ ಯೋಧ ಪರಮೇಶ್ವರ ಗೌಡರವರು ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಲೇಹ್, ಲಡಾಕ್, ಅಸ್ಸಾಂ, ರಾಜಸ್ಥಾನ, ಸೂರತ್ಗಢ ಮೊಂತಾದಡೆಗಳಲ್ಲಿ ಸೇವೆ ಸಲ್ಲಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದು ಹುದ್ದೆಯಲ್ಲಿ ಭಡ್ತಿ ಹೊಂದಿ ಜಮ್ಮುವಿನಲ್ಲಿ ಹವಾಲ್ದಾರ್ ಆಗಿ ನಾಲ್ಕು ವರ್ಷಗಳ ಸೇವೆಸಲ್ಲಿಸಿದರು. ಭಯಾನಕ ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ ಶ್ರೀಯುತರು ಕಾಶ್ಮೀರದ ಉಧಂಪುರ ಸಮೀಪದ ಕೆಹರಿ ಎಂಬಲ್ಲಿ ದಿನಾಂಕ 09-06-2002 ರಂದು ಪಾಕ್ ಸೈನಿಕ ರಶೆಲ್ ದಾಳಿಗೆ ಗುರಿಯಾಗಿ ಹುತಾತ್ಮರಾದರು. 

ಈ ಪರಾ ಕ್ರಮವನ್ನುಸ್ಮರಿಸುವ ಸಲುವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯ ಉನ್ನತ ಅಥಿಕಾರಿಗಳ ಪರವಾಗಿ ಶತಶತ ನಮನಗಳನ್ನೊಳಗೊಂಡ ವಿಶೇಷ ಸ್ಮರಣಿಕೆಯೊಂದನ್ನು19 ಕರ್ನಾಟಕ ಬೆಟಾಲಿಯನ್ ಎನ್. ಸಿ. ಸಿ. ಮಡಿಕೇರಿ ಇದರ ಸುಬೇದಾರ್ ಮೇಜರ್ ಮಲ್ಲಿಕಾರ್ಜುನ, ಸುಬೇದಾರ್ ರಾಜು ಗುರುಂಗು, ಸಂತ ಫಿಲೋಮಿನಾ ಕಾಲೇಜಿನ ಎನ್. ಸಿ. ಸಿ. ಅಧಿಕಾರಿಯಾಗಿರುವ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತು ಎನ್. ಸಿ. ಸಿ.ಕೆಡೆಟ್ಗಳಾದ ಸೀನಿಯರ್ ಅಂಡರ್ ಆಫೀಸರ್ ಸಾತ್ವಿಕ್ ಡಿ. ಎಸ್. ಜೂನಿಯರ್ ಅಂಡರ್ ಆಫೀಸರ್‌ ಸ್ವಸ್ತಿಕಕೆ, ಕೃತಿಕೆ. ಎನ್., ಕ್ಯಾಡೆಟ್ ರಿಯಾ, ಸಂಜನಾ ಇವರು ದಿ| ಪರಮೇಶ್ವರ ಗೌಡ ಕೆ. ಇವರ ಪತ್ನಿಯಾದ ನಾರಿ ಶಕ್ತಿ ಕೆ. ಪಿ. ಪುಷ್ಪಾವತಿ ಇವರಿಗೆ ಹಸ್ತಾಂತರಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.