ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸಖು ಹಾಗೂ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಿದರು.

ನಾಲ್ಕು ಬಾರಿಯ ಶಾಸಕ 58 ವರುಷದ ಸುಖ್ವಿಂದರ್ ಅವರು ಹಿ. ಪ್ರ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್ ಅಗ್ನಿಹೋತ್ರಿ ಉಪ ಮುಖ್ಯಮಂತ್ರಿ ಆದರು. 68 ಸ್ಥಾನ ಬಲದ ಸದನದಲ್ಲಿ ಕಾಂಗ್ರೆಸ್ 40 ಶಾಸಕರನ್ನು ಹೊಂದಿದೆ.

182 ಸದಸ್ಯ ಬಲದ ಗುಜರಾತ್ ವಿಧಾನ ಸಭೆಗೆ ಬಿಜೆಪಿ 156 ಸದಸ್ಯರ ಭಾರೀ ಗೆಲುವು ಕಂಡಿದೆ. ಭೂಪೇಂದ್ರ ಪಟೇಲ್ ರಾಜ್ಯದ 18ನೇ ಮುಖ್ಯಮಂತ್ರಿ ಎರಡನೇ ಅವಧಿಗೆ ಮುಖ್ಯಮಂತ್ರಿ ಆದರು.