ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಡಿಬಟ್ಲ ಗ್ರಾಮದ 24ರ ವೈಶಾಲಿ ಎಂಬ ದಂತ ವೈದ್ಯೆಯ ಮನೆಗೆ ದಾಳಿ ಮಾಡಿದ 50ಕ್ಕೂ ಹೆಚ್ಚು ಯುವಕರ ಗುಂಪು ಮನೆಯ ಬಹು ವಸ್ತುಗಳನ್ನು ಪುಡಿ ಮಾಡಿ ಹೆತ್ತವರ ಮೇಲೆ ಹಲ್ಲೆ ಮಾಡಿ ಅಪಹರಿಸಿಕೊಂಡು ಹೋಗಿದೆ. ಈ ಅಪಹರಣವು ನಡು ಹಗಲಿನಲ್ಲಿ ನಡೆದಿದೆ. ಮನೆ ಬಳಿಯ ಕಾರು, ಮನೆಯ ವಸ್ತುಗಳನ್ನು ಪುಡಿ ಮಾಡಿರುವ ಯುವಕರ ದಂಡು ತಡೆದ ಹೆತ್ತವರ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿದೆ.

Image courtesy

ನನ್ನ ಮಗುಳನ್ನು ಏನೂ ಕೇಳದೆ ಎಳೆದುಕೊಂಡು ಹೋಗಿ ಕಾರಿಗೆ ತುರುಕಿಕೊಂಡು ಪರಾರಿಯಾಗಿದ್ದಾರೆ. ಪೋಲೀಸರು ಏನೂ ಮಾಡುತ್ತಿಲ್ಲ. ನನ್ನ ಮಗಳಿಗೆ ಏನು ಮಾಡಿಯಾರು? ಇದು ದೊಡ್ಡ ಅನ್ಯಾಯ, ದೊಡ್ಡ ಪಾಪ ಎಂದು ವೈಶಾಲಿಯವರ ತಾಯಿ ಅಳುತ್ತ ಹೇಳುವುದು ಕಂಡಿದೆ. "ಇದು ತುಂಬ ಗಂಭೀರವಾದ ಅಪರಾಧ. ಐಪಿಸಿ 307 ಮತ್ತಿತರ ಸೆಕ್ಷನ್‌ಗಳ ಅಡಿ ಮೊಕದ್ದಮೆ ಹೂಡಿ, ತನಿಖೆ ನಡೆದಿದೆ ಎಂದು ರಾಜಕೊಂಡದ ಪೋಲೀಸು ಉಪ ಆಯುಕ್ತ ಸುಧೀರ್ ಬಾಬು ಹೇಳಿದ್ದಾರೆ.

ಒಂದು ಗಂಟೆಯ ಆಪರೇಶನ್ ಬಳಿಕ ಪೋಲೀಸರು ಸುರಕ್ಷಿತವಾಗಿ ದಂತ ವೈದ್ಯೆಯನ್ನು ರಕ್ಷಿಸಿದ್ದಾರೆ. ಕೆಲವು ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನವರು ಮುಖ್ಯರು ಓಡಿ ಹೋಗಿದ್ದಾರೆ ಎಂದು ಉಪ ಆಯುಕ್ತ ಸುಧೀರ್ ಬಾಬು ಪತ್ರಿಕೆಗಳಿಗೆ ಸುದ್ದಿ ಬಿಡುಗಡೆ ಮಾಡಿದರು.