1799ರ ಮೇ 4ರಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಹೋರಾಡಿ ಮಡಿದ ಬೆನ್ನಿಗೆ ಆತನ ಅರಮನೆಗೆ ನುಗ್ಗಿದ ಬ್ರಿಟಿಷ್ ಸೈನಿಕರು ಟಿಪ್ಪುವಿನ ಮಲಗುವ ಕೋಣೆಯಲ್ಲಿದ್ದ ಖಡ್ಗವನ್ನು ತಂದು ಮೇಜರ್ ಜನರಲ್ ಬೇಯರ್ಡ್‌ಗೆ ಒಪ್ಪಿಸಿದ್ದರು. ಆ ಖಡ್ಗವು ಈಗ ಲಂಡನ್ನಿನ ಬೋನ್ಹಾಮ್ಸ್ ಹರಾಜಿನಲ್ಲಿ ರೂ. 145 ಕೋಟಿ ಗಳಿಸಿದೆ.
ಹಲವು ಕೈ ಬದಲಾದ ಈ ಖಡ್ಗವನ್ನು ದಶಕದ ಹಿಂದೆ ಪರಾರಿ ಉದ್ಯಮಿ ವಿಜಯ ಮಲ್ಯ ಹರಾಜಿನಲ್ಲಿ ಕೊಂಡಿದ್ದರು. ಕೊನೆಗೆ ಅದೃಷ್ಟ ತಂದಿಲ್ಲ ಎಂದು ಅದನ್ನು ಹರಾಜು ಸಂಸ್ಥೆಗೆ ಒಂದೂವರೆ ಕೋಟಿ ರೂಪಾಯಿಗೆ ಮಾರಿದ್ದರು. ಈಗ ಹರಾಜು ಸಂಸ್ಥೆಗೆ ಟಿಪ್ಪುವಿನ ಖಡ್ಗಗಳಲ್ಲಿ ಒಂದು ಅಪಾರ ಲಾಭ ತಂದಿದೆ. ಖಡ್ಗದ ಮೇಲೆ ಸಂಶೀರ್ ಇ ಮಲಿಕ್ ಎಂಬ ಕೆತ್ತನೆ ಇದೆ. ಹರಾಜಿನಲ್ಲಿ ಕೊಂಡವರ ಹೆಸರು ಬಹಿರಂಗ ಪಡಿಸಲು ಬೋನ್ಹಾಮ್ಸ್ ನಿರಾಕರಿಸಿದೆ.