ನಗರಗಳಲ್ಲಿನ ಒಳಚರಂಡಿಗಳಿಗೆ ಬಳಿಯ ಅಂಗಡಿಗಳವರೇ ಖಳನಾಯಕರು ಅಂದರೆ ಕಸ ತುಂಬಿ ತಡೆ ಒಡ್ಡುವವರು ಎಂಬುದು ಪೂರ್ಣ ಸತ್ಯ ಹಾಗೂ ಕೆಲವರಿಗಾದರೂ ತಿಳಿದಿರುವ ಸಂಗತಿಯಾಗಿದೆ.

ಒಳಚರಂಡಿಯ, ಗಟಾರದ‌ ಸಂದಿ‌ ದೊಡ್ಡದಾಗಿಯೇ ತೆರೆದಿದ್ದರೆ ಕಸ ಹಾಕುತ್ತಾರೆ. ಸಣ್ಣ‌ಸಂದು ಮಾತ್ರ ಕಂಡರೆ‌ ಕಸ ನೂಕುತ್ತಾರೆ. ಇನ್ನು ಒಳ ಸೇರಿದ ಕಸವು ಒಳಗೆ ಅಡ್ಡಲಾಗಿ ನಿಂತು ಹರಿಯುವ ಗಟಾರದ‌ ನೀರಿಗೆ, ಮಳೆಗಾಲದಲ್ಲಿ ಮಳೆ ನೀರಿಗೆ ತಡೆಯೊಡ್ಡಿ ಹೊಲಸು ತುಂಬಿ ಹೊರಕ್ಕೆ ಹರಿಯುವಂತೆ ಮಾಡುತ್ತದೆ. 

ಇದು ಮಂಗಳೂರು ಒಂದರ ಕತೆಯಲ್ಲ, ಎಲ್ಲ ದೊಡ್ಡ ನಗರಗಳ ಕತೆಯಾಗಿದೆ. ಬೆಂಗಳೂರು, ದೆಹಲಿ ಮೊದಲಾದ ನಗರಗಳು ಕೂಡ ಇದೇ ಸಮಸ್ಯೆಗಳನ್ನು ಎದುರಿಸುತ್ತಿವೆ. ಸಣ್ಣ ಪಟ್ಟಣಗಳಲ್ಲಿ ತೆರೆದ ಚರಂಡಿ ಇರುವುದರಿಂದ ಕಸ ತೆಗೆಯುವುದು ಸಾಧ್ಯ. ಆದರೆ ನಗರಗಳ ಒಳಚರಂಡಿಗಳು ಮುಚ್ಚಿ ಇರುತ್ತವೆ. ಕೆಲವು ಕಡೆ ಸೂಕ್ತ ತೆರೆ ಭಾಗವೂ ಇರುವುದಿಲ್ಲ. ಹಾಗಾಗಿ ಒಳ ನೂಕಿದ ಕಸ ತೆಗೆಯಲು ಪೌರ ಕಾರ್ಮಿಕರು ತುಂಬ ಶ್ರಮ ಪಡಬೇಕಾಗುತ್ತದೆ. 

ನಾಗರಿಕರು, ಸಾರ್ವಜನಿಕರು ಸ್ವಲ್ಪ ಸಂಯಮದಿಂದ, ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಡೆದುಕೊಂಡರೆ ಈ ಸಮಸ್ಯೆ ಎದುರಾಗಲಾರದು. 

ಭಾರತದ ಜನರು ಬೆಳೆದು ಬಲಿಯುವ ಪರಿಸರವೇ ಈ ರೀತಿಯದಾದ್ದರಿಂದ ಇದು ಒಮ್ಮೆಗೇ ಬದಲಾಗುವುದಿಲ್ಲ. ತಿಳಿದು ನಡೆಯುವ ನಾಗರಿಕ ಪರಿಸರವನ್ನು ಮುಂದೆ ಆದರೂ ರೂಪಿಸಿಕೊಳ್ಳಬೇಕು.