ಬೆಂಗಳೂರು, ಮೇ 24: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿ ಮಂಗಳೂರು ಉಳ್ಳಾಲ ಕ್ಷೇತ್ರದ ಶಾಸಕ, ಅವಿರೋಧವಾಗಿ ಆಯ್ಕೆಯಾದ ಯುಟಿ ಖಾದರ್ ಅವರನ್ನು ಶುಭ ಕೋರಿದರು. ಇಂದು ವಿಧಾನಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ ಯವರು, ನೀವು ಸದನದ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಿಮಗೆ ಮಹತ್ವದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಂದಕ್ಕೆ ಮಾತನಾಡಿದ ಅವರು ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ನಿಷ್ಠೆಯಿಂದ ಕೆಲಸ ಮಾಡಿದ್ದೀರಿ, ಅಷ್ಟೇ ಅಲ್ಲದೆ ನಿಮಗೆ ಇಪ್ಪತ್ತು ವರ್ಷದ ಅನುಭವವೂ ಇದೆ ಎಂದರು. ಸಂವಿಧಾನದಲ್ಲಿ ಸಭಾಪತಿಗಳಿಗೆ ವಿಶೇಷ ಸ್ಥಾನ ಇರುವುದರಿಂದ , ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಹಾಗೂ ನೀವು ನೀಡುವ ತೀರ್ಪು ಲ್ಯಾಂಡ್ ಮಾರ್ಕ್ ಆಗಿರವುವಂತ್ತದ್ದು, ಹಾಗೇನೆ ನಿಮ್ಮ ತಕ್ಕಡಿ ಯೂ ಸಮವಾಗಿರಲಿ ಎಂದು ಅವರು ಹೇಳಿದರು.