ಕರ್ನಾಟಕದ 31 ಜಿಲ್ಲೆಗಳ 236 ತಾಲೂಕುಗಳಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಈ 195ರಲ್ಲಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಎಂದು ಘೋಷಣೆ ಮಾಡಲಾಗಿದೆ. 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ.
ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡಬಿದಿರೆ, ಉಡುಪಿ ಜಿಲ್ಲೆಯ ಬ್ರಹ್ಮಾವರ, ಉತ್ತರ ಕನ್ನಡ ಜಿಲ್ಲೆಯ ಬಟ್ಕಳ ಸಹಿತ ಮೂರು ಎಂದು ಆರು ತಾಲೂಕುಗಳು ಸೇರಿವೆ. ತೀವ್ರ ಬರಪೀಡಿತ ತಾಲೂಕುಗಳು ಕರಾವಳಿಯಲ್ಲಿ ಇಲ್ಲ. ಹೆಚ್ಚಿನವು ಬೆಂಗಳೂರು ಸುತ್ತಿನವೇ ಆಗಿವೆ.