ಸಿಂಗಾಪುರದ 9ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಸಿಂಗಾಪುರದ ಖ್ಯಾತ ಅರ್ಥಶಾಸ್ತ್ರಜ್ಞ ತರ್ಮನ್ ಷಣ್ಮುಗರತ್ನಂ ಅಧಿಕಾರ ವಹಿಸಿಕೊಂಡರು.

ಭಾರತೀಯ ಮೂಲದ ಅಲ್ಲಿನ ಮುಖ್ಯ ನ್ಯಾಯಾಧೀಶರಾದ ಸುಂದರೇಶ ಮೆನನ್ ಅವರು ಪ್ರಮಾಣವಚನ ಬೋಧಿಸಿದರು. 154 ವರುಷ ಹಳೆಯ ಅರಮನೆ ಅಧ್ಯಕ್ಷರ ಅಧಿಕೃತ ನಿವಾಸವಾದ ಇಸ್ತಾನಾದಲ್ಲಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರ ಅಧಿಕಾರಾವಧಿ 6 ವರುಷ.

ಪ್ರಧಾನಿ ಲೀ ಸೈನ್ ಲೂಂಗ್ ಮತ್ತು ಸಂಪುಟ ಸದಸ್ಯರು ಹಾಜರಿದ್ದರು. ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ಬರು ಚೀನಾ ಮೂಲದ ಅಭ್ಯರ್ಥಿಗಳ ವಿರುದ್ಧ ಷಣ್ಮುಗರತ್ನಂ ಗೆದ್ದಿದ್ದರು.