ಕರ್ನಾಟಕದ ರಾಜ್ಯದ ಜನಪ್ರಿಯ ಚಲನಚಿತ್ರ ನಟರಾದ ಪುನೀತ್ ರಾಜ್ ಕುಮಾರ್ ರವರು ಅಕ್ಟೋಬರ್ 29, 2021 ರಂದು ಅಕಾಲಿಕವಾಗಿ ವಿಧಿವಶವಾಗಿರುವುದು ಹೈನುಗಾರರಿಗೆ ಅಪಾರವಾದ ದು:ಖವನ್ನು ತಂದಿದೆ. ಕರ್ನಾಟಕ ರಾಜ್ಯದ ನಾಡು ನುಡಿ, ಸಂಸ್ಕ್ರತಿಯ ಅಭಿವೃದ್ಧಿಗೆ ಸದಾ ಹೋರಾಟ ಮಾಡುತ್ತಿದ್ದು ವಿಶೇಷವಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಅಭಿವೃದ್ಧಿಗೆ ಅನುಕೂಲವಾಗುವಂತೆ ನಂದಿನಿ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ಉಚಿತ ಸೇವೆ ನೀಡುವ ಮೂಲಕ ಹೈನುಗಾರರಿಗೆ ಸೇವೆ ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಮೃತರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲೆಂದು ಪ್ರಾರ್ಥಿಸಿ, ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
