ದೆಹಲಿಗೆ ಆಮ್ಲಜನಕ ಪೂರೈಕೆ ಮಾಡುವಲ್ಲಿ ಕೋರ್ಟ್ ಆದೇಶ ಪಾಲಿಸದ ಕೇಂದ್ರ ಸರಕಾರಕ್ಕೆ ನ್ಯಾಯಾಂಗ ನಿಂದನೆ ನೋಟೀಸು ನೀಡಿರುವ ದೆಹಲಿ ಹೈಕೋರ್ಟ್ ಬಗೆಗಿನ ‌ವಿವಾದವನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿಸಿತು.

ಮೇ 3ರೊಳಗೆ ದೆಹಲಿಗೆ‌ ಸರಿಯಾಗಿ ಆಮ್ಲಜನಕ ‌ಪೂರೈಸುವಂತೆ ಸುಪ್ರೀಂ ಕೋರ್ಟು ಏಪ್ರಿಲ್ 30ರಂದು ನೀಡಿದ ಆದೇಶ ಪಾಲನೆ ಮಾಡಿಲ್ಲ ಎಂದು ಏಪ್ರಿಲ್ 4ರಂದು ದೆಹಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ‌ನ್ಯಾಯಾಂಗ ನಿಂದನೆ ನೋಟೀಸು ಜಾರಿ ಮಾಡಿದೆ.

ಹಿಂದೆ ದೆಹಲಿ ಹೈಕೋರ್ಟ್ ದೆಹಲಿಗೆ 490 ಮೆಟ್ರಿಕ್ ಟನ್ ಆಮ್ಲಜನಕ ‌ಪೂರೈಸುವಂತೆಯೂ, ಆಬಳಿಕ ಸುಪ್ರೀಂ ಕೋರ್ಟ್ 700 ಮೆಟ್ರಿಕ್ ಟನ್ ಮೆಡಿಕಲ್ ಆಮ್ಲಜನಕವನ್ನು ‌ಆದ್ಯತೆಯ ಮೇಲೆ ರಾಜಧಾನಿಗೆ ಪೂರೈಸುವಂತೆ ಹೇಳಿತ್ತು. ಇವೆರಡನ್ನೂ ಪಾಲಿಸದ ನಿಮ್ಮ ‌ಮೇಲೆ ಯಾಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಾರದು ಎಂದು ದೆಹಲಿ ಹೈಕೋರ್ಟ್ ಕೇಳಿದೆ.

ಇದನ್ನು ಕೇಂದ್ರ ಸುಪ್ರೀಂನಲ್ಲಿ ಪ್ರಶ್ನಿಸಿತು. ಆದ್ಯತೆಯ ಕೇಸು ಸ್ವೀಕರಿಸುವ ಚಂದ್ರಚೂಡ್ ಬುಧವಾರ ಲಭ್ಯವಿಲ್ಲದ್ದರಿಂದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರು ಸಿಜೆಐ ಎನ್. ವಿ. ರಮಣರನ್ನು ಕೇಳಿಕೊಂಡರು. ಇದನ್ನು ಜಸ್ಟಿಸ್ ಚಂದ್ರಚೂಡರೆ ಗಮನಿಸಬೇಕು ಎಂದ ಸಿಜೆಐ ರಮಣ ಅವರು ಅದನ್ನು ‌ವಿಚಾರಣೆಗೆ ಸ್ವೀಕರಿಸುವ ಕೆಲಸ ಮಾತ್ರ ಮಾಡಿದರು.