ಮೇ 15ರಿಂದ ಜಾರಿಗೆ ಬರುವ ‌ವಾಟ್ಸ್‌ಯಾಪ್ ವ್ಯಕ್ತಿಗತ ಖಾಸಗಿ ನೀತಿ ಬಗೆಗೆ ಪ್ರತಿಕ್ರಿಯಿಸುವಂತೆ ದೆಹಲಿ ಕೋರ್ಟು, ಫೇಸ್‌ಬುಕ್‌ ಮತ್ತು ಕೇಂದ್ರ ಸರಕಾರಗಳಿಗೆ ನೋಟೀಸು ಜಾರಿ ಮಾಡಿದೆ.

ತುದಿಯಿಂದ ತುದಿಗೆ ಮಾಹಿತಿ ಎನ್‌ಕ್ರಿಪ್ಟ್ ಆಗಿ ಸಾಗಿಸುವುದಾಗಿ ವಾಟ್ಸ್‌ಯಾಪ್‌ ಹೇಳಿದೆ. ಅದನ್ನು ಪ್ರಶ್ನಿಸಿ ದೆಹಲಿ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ‌ವಿಚಾರಣೆಗೆ ಎತ್ತಿಕೊಂಡ ಜಸ್ಟಿಸ್ ಡಿ. ಎನ್. ಪಟೇಲ್, ಜಸ್ಟಿಸ್ ಜಸ್ಮೀತ್ ಸಿಂಗ್‌ರು ಇದ್ದ ನ್ಯಾಯ ಪೀಠವು ಮೇ 13ರೊಳಗೆ‌ ಪ್ರತಿಕ್ರಿಯೆ ನೀಡುವಂತೆ ನೋಟೀಸು ‌ಜಾರಿಮಾಡಿದೆ.