ಬಿಜೆಪಿ ಸಂಸದರು ರಾಜ್ಯದಲ್ಲಿ ಹುಲಿಯಂತೆ ಕೂಗಾಡುತ್ತಾರೆ. ದೆಹಲಿಯಲ್ಲಿ ಮೋದಿಯೆದುರು ಇಲಿಯಂತೆ ಅಡಗುತ್ತಾರೆ‌ ಎಂದು ಮಾಜೀ ಮುಖ್ಯಮಂತ್ರಿ ಸಿದ್ದರಾಮನಹುಂಡಿ ಸಿದ್ದರಾಮಯ್ಯನವರು ಸರಣಿ‌ ಟ್ವೀಟ್ ಸಮರ ಸಾರಿದ್ದಾರೆ.

ರಾಜ್ಯದ ಸಮಸ್ಯೆ ಬಗೆಗೆ ‌ಸಂಸತ್ತಿನಲ್ಲಿ ಮಾತಾಡಿದಿರಾ?ಮೋದಿ ಕೇಳಿ ಆಮ್ಲಜನಕ ತಂದಿರಾ? ನಮ್ಮದೇ ಜಿಎಸ್‌ಟಿ ಪಾಲು ಯಾಕೆ‌ ಕೇಳಲಿಲ್ಲ? ಪ್ರವಾಹ ಪರಿಹಾರ ಎಂದು ಮೂರು ಕಾಸು ನೀಡಿದಾಗ ಮಾತಾಡಿದಿರಾ? ಲಸಿಕೆ ಕೊರತೆ ದೂರ ಮಾಡಿದಿರಾ? ಕೊರೋನಾ ಹೆಸರಲ್ಲಿ ಆಸ್ಪತ್ರೆ ಬೆಡ್ ದಂಧೆ ನಡೆದರೆ ಸಂಸದರು ಏನು ಮಾಡಿದಿರಿ? ಹೀಗೆ ಹತ್ತಾರು ಪ್ರಶ್ನಾಕಣೆಗಳನ್ನು ಟ್ವೀಟ್ ‌ಬಾಣದಲ್ಲಿ ಹೂಡಿದ್ದಾರೆ‌ ಸಿದ್ದರಾಮಯ್ಯ. ಮುಖ್ಯವಾಗಿ ಮೈಸೂರು ಸಂಸದ ಪ್ರತಾಪ ಸಿಂಹ ಬಗೆಗೆ ನೀನು‌ ಮೋದಿಯೆದುರಿನ ಇಲಿ, ಇಲ್ಲೇಕೆ ಹುಲಿ ವೇಷ ಎಂದಿದ್ದಾರೆ.