ಕೊರೋನಾ ‌ಭಯದಿಂದ 46ರ ಪ್ರಾಯದ ಅರೆಕಾಲಿಕ ಪತ್ರಕರ್ತರೊಬ್ಬರು ಬುಧವಾರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊನ್ನಾಳಿ ತಾಲೂಕಿನ ಕುಂದೂರಿನ‌ ಪರಮೇಶ್ ಅರೆಕಾಲಿಕ ವರದಿಗಾರರಾಗಿ‌ ಸೇವೆ ಸಲ್ಲಿಸುತ್ತಿದ್ದರು. ಎರಡು ದಿನಗಳಿಂದ ಕೆಮ್ಮು, ತಲೆನೋವು, ಉಸಿರು‌ ತೊಂದರೆ ಅನುಭವಿಸಿದರು. ಇದು ಕೊರೋನಾ, ಇದಕ್ಕೆ ಆಮ್ಲಜನಕ ಎಲ್ಲಿ, ವೆಂಟಿಲೇಶನ್ ಎಲ್ಲಿ, ಪರೀಕ್ಷೆ ಏನು ಎಂದು ಬಡಬಡಿಸುತ್ತಿದ್ದರು. ಇಂದು ಅಮರಾವತಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ‌ಮಡದಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ರೈಲ್ವೆ ಪೋಲೀಸರು ಕೇಸು ದಾಖಲಿಸಿದ್ದು, ತನಿಖೆ ‌ನಡೆದಿದೆ.