ನನ್ನ ಲೆಕ್ಕಾಚಾರದಂತೆ ಮುಂದಿನ‌ ತಿಂಗಳು ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆದರೆ 2008ರ ಮಾದರಿಯಲ್ಲಿ ಬಿಜೆಪಿ ಸರಕಾರ ರಚಿಸಲು ಪ್ರಯತ್ನಿಸುತ್ತದೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಎನ್‌ಡಿ ಟೀವಿಯಲ್ಲಿ ಮಾತನಾಡುತ್ತ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಹೇಳಿದರು.

ಲೋಕ ಸಭೆ ಮತ್ತು ರಾಜ್ಯ ವಿಧಾನ ಸಭೆ ಚುನಾವಣೆಗಳು ಬೇರೆ ಬೇರೆ ದೃಷ್ಟಿಕೋನದಿಂದ ನಡೆಯುತ್ತವೆ. ಆದ್ದರಿಂದಲೇ ಕೇಂದ್ರದಲ್ಲಿ ‌ಬಿಜೆಪಿ ಸರಕಾರ ಇದ್ದರೂ ದೇಶದ ಅರ್ಧಕ್ಕರ್ಧ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರಕಾರ ಇದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದರೂ ಬಿಜೆಪಿ ಸರಕಾರ ರಚಿಸಲಿಲ್ಲವೆ? ಪವಾರ್ ಪ್ರಶ್ನಿಸಿದರು.

2024ರ ಲೋಕ ಸಭೆ ಚುನಾವಣೆಗೆ ಮೊದಲು ಎಲ್ಲ ವಿರೋಧ ಪಕ್ಷಗಳವರು ಏನಾದರೂ ಮಾಡಲೇಬೇಕು. ಇಲ್ಲದಿದ್ದರೆ ಬಿಜೆಪಿ ಸೋಲಿಸುವುದು ಕಷ್ಟವಾಗುತ್ತದೆ ಎಂದೂ ಅವರು ಹೇಳಿದರು.