ಮಹಿಳಾ ಧ್ವನಿ ಅರ್ಥದ ಸದಾಯಿ ಬಾನೋವಾನ್ ಎಂಬ ಮಹಿಳೆ ಮಾಲೀಕತ್ವದ ಅಪಘಾನಿಸ್ತಾನದ ಬಾನುಲಿಗೆ ಹೇರಿದ್ದ ನಿಷೇಧವನ್ನು ತಾಲಿಬಾನ್ ಸರಕಾರ ಶುಕ್ರವಾರ ತೆಗೆದು ಹಾಕಿತು.

ರಮದಾನ್ ತಿಂಗಳಲ್ಲಿ ಸಂಗೀತ ಪ್ರಸಾರ ಮಾಡಿದರು ಎಂದು ಕಳೆದ ವಾರ ಸದಾಯಿ ಬಾನೋವಾನ್ ನಿಷೇಧಿಸಲಾಗಿತ್ತು. ರಮದಾನ್ ನಿಯಮ ಪಾಲಿಸುವುದಾಗಿ ಒಪ್ಪಿದ ಮೇಲೆ ಆ ರೇಡಿಯೋ ಮೇಲಿನ‌ ನಿಷೇಧ ತೆಗೆಯಲಾಗಿದೆ. ಹತ್ತು ವರುಷಗಳ ಹಿಂದೆ ಬದಲ್‌ಖಾನ್ ಪ್ರಾಂತ್ಯದಲ್ಲಿ ಮಹಿಳೆ ಆರಂಭಿಸಿದ ಈ ರೇಡಿಯೋದ ಎಂಟು ಮಂದಿ ಸಿಬ್ಬಂದಿಯಲ್ಲಿ ಆರು ಮಂದಿ ಹೆಂಗಸರು.