ಶುಕ್ರವಾರ ಬೆಳ್ತಂಗಡಿ ತಾಲೂಕಿನ ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ಲಾಯಿಲ, ನಾರಾವಿ, ಚಾರ್ಮಾಡಿ, ಸವಣಾಲು, ಕಡಿರುದ್ಯಾವರ, ಬೆಳ್ತಂಗಡಿಗಳಲ್ಲಿ ಆಲಿಕಲ್ಲು ಸಹಿತ ಗಾಳಿ ಮಳೆಯಾಗಿದೆ.
ಎಲ್ಲ ಕಡೆ ಆಲಿಕಲ್ಲು ಮತ್ತು ಗಾಳಿ ಬೆಳೆಗಳಿಗೆ ಹಾನಿ ಉಂಟು ಮಾಡಿದೆ. ಫಸಲು ನಾಶ, ಬುಡಮೇಲು ಆದ ಬಾಳೆ ತೋಟಗಳು ಎಲ್ಲ ಕಡೆ ಕಂಡು ಬಂದವು.