ಉನ್ನತ ಅಧಿಕಾರಿಗಳ ಜೊತೆಗಿನ ತೀವ್ರ ಚರ್ಚೆಯ ಬಳಿಕ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೇ 24ರಿಂದ ಆರಂಭವಾಗಬೇಕಿದ್ದ ಪಿಯುಸಿ ಪರೀಕ್ಷೆಯನ್ನು ಮುಂದೂಡಿದ್ದಾರೆ.

ಇದೇ ವೇಳೆ ಪಿಯುಸಿ ಮೊದಲ ವರುಷದ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಯಿತು. ಅವರೆಲ್ಲ ನೇರ ಎರಡನೆಯ ವರುಷದ ಪಿಯುಸಿಗೆ ತೇರ್ಗಡೆ ಹೊಂದುವರು.

ಪಿಯುಸಿ ಪರೀಕ್ಷೆಯ ಮುಂದಿನ ದಿನಾಂಕವನ್ನು ಪರೀಕ್ಷೆ ನಡೆಸುವುದಕ್ಕೆ ಕನಿಷ್ಟ 15 ದಿನ ಮೊದಲು ಘೋಷಿಸಲಾಗುವುದು. ಈಗ ಪರೀಕ್ಷೆಗೆ ತಯಾರಾಗಿರುವ ವಿದ್ಯಾರ್ಥಿಗಳು ಅಭ್ಯಾಸ ಮುಂದುವರಿಸುವಂತೆ‌ ಸಚಿವರು ತಿಳಿಸಿದರು.

1,049 ಕೇಂದ್ರಗಳ 5,562 ಕಾಲೇಜುಗಳಲ್ಲಿ ಪರೀಕ್ಷೆಗೆ ಸಿದ್ಧತೆ ನಡೆದಿತ್ತು. ಒಟ್ಟು 6,86,708 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯಲಿದ್ದರು. ಅವರಲ್ಲಿ 5,92,816 ಹೊಸ, 76,422 ಹಳೆಯ, 17,470 ಹೊರಗಿನ ಖಾಸಗಿ ದಾರಿಯ ವಿದ್ಯಾರ್ಥಿಗಳು ಇದ್ದರು.