ಕಾಂಬೋಡಿಯಾದ ಪನಂಪೆನ್ಹ್ ಬಳಿ 72ರ ಲುವಾನ್ ನಾಮ್ ಎಂಬವರನ್ನು ಅವರೇ ಸಾಕಿದ ಮೊಸಳೆಗಳು ತಿಂದು ತೇಗಿದವು. ಸಿಯಮ್‌ರೆಪ್‌ನಲ್ಲಿ ಲುವಾನ್‌ರ ಕುಟುಂಬವು ಮೊಸಳೆ ಸಾಕಣೆ ಕೇಂದ್ರ ನಡೆಸುತ್ತಿತ್ತು.
ಮೊಟ್ಟೆ ಇಟ್ಟ ಮೊಸಳೆಯೊಂದನ್ನು ಬೇರ್ಪಡಿಸಲು ಲುವಾನ್ ಕೋಲು ಹಿಡಿದು ಪ್ರಯತ್ನಿಸುತ್ತಿದ್ದರು. ಮೊಸಳೆ ಕೋಲನ್ನು ಕಚ್ಚಿ ಹಿಡಿದುದರಿಂದ ಅವರು ಸಮತೋಲನ ತಪ್ಪಿ ಮೊಸಳೆ ಮಡುವಿಗೆ ಬಿದ್ದರು. ಕೂಡಲೆ ಎಲ್ಲ ಮೊಸಳೆಗಳು ಸುತ್ತಿ ಮುತ್ತಿಕೊಂಡು ಮೊದಲು ಕೋಲು ಹಿಡಿದ ಕಯ್ಯನ್ನು ಆಮೇಲೆ ಇಡೀ ದೇಹವನ್ನು ನುಂಗಿ ಹಾಕಿದವು.