ನಾಸಾದ ಎಲ್‌ಆರ್‌ಓ ಅರ್ಥಾತ್‌ ಚಂದ್ರನನ್ನು ಕಕ್ಷೆಯಲ್ಲಿ ಸುತ್ತುವ ಸಮನ್ವಯ ಸಾಧನದ ಮೂಲಕ ವಿಜ್ಞಾನಿಗಳು ತಿಂಗಳನ ಮೇಲೆ ಒಂದು ಗವಿಯನ್ನು ಪತ್ತೆ ಮಾಡಿದ್ದು, ಅದು ಮುಂದಿನ ಮಾನವ ಸಂಶೋಧನಾ ನೆಲೆ ಎಂದು ಲೆಕ್ಕ ಹಾಕಲಾಗಿದೆ.

ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬುಜ್ ಆಲ್ಡ್ರಿನ್ ಅವರು ಚಂದ್ರನ ಮೇಲೆ ಇಳಿದಿದ್ದ ಮೇರ್ ಟ್ರಾಕ್ವಾಲಿಟೀಸ್ ಎಂದರೆ ಶಾಂತಿ ಸಾಗರ ಸ್ಥಳದ  ಬಳಿಯಲ್ಲೇ ಈ ಗವಿ ಇದೆ. ಅಲ್ಲಿಂದ ಈ ಗವಿಯ ಒಳಕ್ಕೆ ಹೋಗುವುದು ಸಾಧ್ಯ.

14 ಟೆನ್ನಿಸ್ ಕೋರ್ಟ್‌ನಷ್ಟು ವಿಸ್ತಾರವಾದ ಈ ಗವಿಯು 45 ಮೀಟರ್ ಅಗಲ ಮತ್ತು 80 ಮೀಟರ್ ಉದ್ದಕ್ಕೆ ಅಡ್ಡ ಕೆಳಮುಖವಾಗಿ ಇದೆ. ಇದು ಬರಿದಾದ ಬೆಂಕಿ ಬಾಯಿ ಲಾವಾದ ಕೊಳವೆ ಎಂದು ಇಟೆಲಿಯ ಟ್ರೆಂಟೊ ವಿಶ್ವವಿದ್ಯಾನಿಲಯದ ಲಾರೆಂಜೋ ಅಬ್ರುಜೋನ್ ಹೇಳಿದ್ದಾರೆ.