ಪಿಲಿಪ್ಪೀನ್ಸ್‌ನಲ್ಲಿ ಸಣ್ಣ ಪಟ್ಟಣವೊಂದರ ಮೇಯರ್ ಆಗಿರುವ ಮಹಿಳೆ ಚೀನಾದ ಗೂಢಚಾರಿಣಿ ಎಂದು ತಿಳಿದು ಬಂದಿದ್ದು, ವಿಷಯ ಹೊರಬರುತ್ತಲೇ ಆಕೆ ನಾಪತ್ತೆಯಾಗಿದ್ದಾರೆ.

ಬಂಬಾನ್ ಎಂಬ ಪಟ್ಟಣದ ಮೇಯರ್ ಅಲೈಸ್ ಗುವೊ. ಚೀನಾದ ಟೀವಿಗಳಲ್ಲಿ ಗುವೋ ಕತೆಗಳು ಇತ್ಯಾದಿ ಪ್ರಸಾರವಾಗುತ್ತಿದ್ದವು. ಮನಿಲಾ ಮತ್ತು ಬೀಜಿಂಗ್ ನಡುವೆ ತೆಂಕಣ ಚೀನಾ ಸಮುದ್ರದ ತಕರಾರು ಇದೆ. ಗುವೋ ಹಲವು ಮಾಹಿತಿ ಚೀನಾಕ್ಕೆ ರವಾನಿಸಿರುವದಾಗಿ ಆಪಾದಿಸಲಾಗಿದೆ. ಪೋಲೀಸರು ಬಂಧನದ ವಾರಂಟ್ ಹೊರಡಿಸುತ್ತಲೇ ಗುವೋ ನಾಪತ್ತೆ ಆಗಿದ್ದಾರೆ. ಹುಡುಕಾಟ ನಡೆದಿದೆ.