ಮೂಡುಬಿದಿರೆ:  ಬೆಳುವಾಯಿ ಲಯನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭ ಜುಲೈ 16ರಂದು ನಡೆಯಲಿದೆ. ಬೆಳುವಾಯಿ ಬ್ಲೋ ಸಮ್  ಶಾಲಾ ಆವರಣದಲ್ಲಿ ನಡೆಯುವ ಈ ಸಮಾರಂಭದಲ್ಲಿ ಸೈಮನ್ ಮಸ್ಕರೇನಸ್ ಅಧ್ಯಕ್ಷರಾಗಿ, ಡೇವಿಡ್ ಡಿ ಡಿಮೆಲ್ಲೋ  ಖಜಾಂಚಿಯಾಗಿ, ಹಾಗೂ ದೇವಾನಂದ ಭಟ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ.

ಲಯನ್ಸ್ ಇಂಟರ್ನ್ಯಾಷನಲ್ ನ ಕ್ಲಬ್ ಓರಿಯಂಟೇ ಶನ್ ನ ಮುಖ್ಯ ಸಂಯೋಜಕ ವಿಜಯ ವಿಷ್ಣುಮಯ್ಯ ಅವರು 24- 25 ನೇ  ಸಾಲಿನ ಮೇಲ್ಕಂಡ ಅಧಿಕಾರಿಗಳನ್ನು ಅನುಸ್ಥಾಪಿಸುವ ಕಾರ್ಯಕ್ರಮವನ್ನು ಇಂದು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ