ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಯಕ್ಷಗಾನ ಅರ್ಥಧಾರಿಯಾಗಿ, ಸನಾತನ ಸಂಸ್ಕೃತಿಯ ಜಾಗೃತಿ ಅಭಿಯಾನದ ಧಾರ್ಮಿಕ ಪ್ರವಚನ ಕಾರರಾಗಿ, ಸಂಪೂರ್ಣ ಭಗವದ್ಗೀತೆಯನ್ನು ಅರ್ಥ ಸಹಿತ ಕಂಠಪಾಠ ಗೈದು ಶ್ರಿಂಗೇರಿ ಜಗದ್ಗುರು ಗಳಿಂದ ಅಭಿನಂದಿಸಲ್ಪಟ್ಟು "ವೇದ ಶಾಸ್ತ್ರ ಪೋಷಿಣಿ" ಗೌರವ ಪಡೆದವರು ಡಾ.ಗಾಳಿಮನೆ.
ಯುಗಾದಿ ಆಧಾರಿತ ಹೊಸ ವರ್ಷದ ಭಾರತೀಯ ರಾಷ್ಟ್ರೀಯ ದಿನದರ್ಶಿಕೆ-ಆಮ್ನಾಯ ಗಾಳಿ ಮನೆ ಗಂಧವಹಸದನಂ ನ್ನು ಸ್ಥಾಪಿಸಿದರು. 'ಅಂದಿನ ಆಚಾರ ಇಂದಿನ ವಿಚಾರ' ಕೃತಿಯನ್ನು ಬರೆದ ಡಾ. ವಿನಾಯಕ ಭಟ್ ಅವರು 1980 ಜೂನ್ 15ರಂದು ಚಂದ್ರಶೇಖರ್ ಭಟ್ಟ ಮತ್ತು ಸವಿತಾರ ಪುತ್ರರಾಗಿ ಜನಿಸಿದರು. ಅಜ್ಜನಿಂದ ವೇದಾಧ್ಯಯನವನ್ನು ಪ್ರಾರಂಭಿಸಿ ತರುವಾಯ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯ, ಮೈಸೂರು ಶ್ರೀ ಮಹಾರಾಜ ಸಂಸ್ಕೃತ ಕಾಲೇಜುಗಳಲ್ಲಿ ತರ್ಕ, ಶಾಸ್ತ್ರ, ಅಧ್ಯಯನದ ತರುವಾಯ ಪಿ ಎಚ್ ಡಿ ಪದವಿ ಮುಗಿಸಿ ಸಂಸ್ಕೃತ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಅಖಿಲ ಹವ್ಯಕ ಮಹಾಸಭೆ ಯು 'ಹವ್ಯಕ ಶಿಕ್ಷಕ ರತ್ನ' ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಈ ಪ್ರಶಸ್ತಿಯು ಇವರಿಗೆ ಇನ್ನಷ್ಟು ಮೇರುಮಟ್ಟಕ್ಕೆ ಕೊಂಡೊಯ್ಯಲು ಆರೋಗ್ಯದಿ ಸಕಲ ಸನ್ಮಂಗಳವನ್ನು ನೀಡಲಿ.