ಮನುಷ್ಯ ಸಂಘಜೀವಿ ಮನಸ್ಸು ಬದುಕಿನ ಪ್ರತಿಯೊಂದು ಹಂತದಲ್ಲೂ ಸಾಂಗತ್ಯವ ಬಯಸುವುದು ಸಹಜ ಬಾಲ್ಯದಲ್ಲಿ ತಂದೆತಾಯಿ ಆಶ್ರಯದಲ್ಲಿ ಬೆಚ್ಚಗಿನ ಅಪ್ಪುಗೆಯ ಬಯಸುವ ಮನ ಯೌವ್ವನದಲ್ಲಿ  ಸ್ವಾತಂತ್ರ್ಯಕ್ಕಾಗಿ ಮುಂದೆ ಬಾಳ ಸಂಗಾತಿಯೊಂದಿಗಿರಲು ವೃದ್ಧಾಪ್ಯದಲ್ಲಿ ಮಕ್ಕಳೊಂದಿಗಿರಲು ಬಯಸುತ್ತೆವೆ.

ಮನಸ್ಸು ಸದಾ ಇತರರೊಂದಿಗೆ ಬೆರೆಯಲು ಬಯಸುವುದು. ನಮ್ಮ ನಿರೀಕ್ಷೆಯಂತೆ ನಡೆಯದಿದ್ದಲ್ಲಿ ಅನಿರೀಕ್ಷಿತ ನೋವು ಖಚಿತ ಯಾರು ಬಯಸದ ಏಕಾಂತ ನಮ್ಮನ್ನ ಆವರಿಸುವುದು.

ಬದುಕಿನೊಳಗೆ ಬೇಕು ಬೇಡಗಳ ಗೊಡವೆ ಅದೊಂದು ಅಂತೆ ಕಂತೆಗಳ ಸಂತೆ ಪ್ರತಿದಿನ ಸಾಯುವ ಭಾವನೆಗಳ ವೇದನೆ ಮಾತು ಮೌನದ ತಕರಾರು ಮನಸ್ಸಿಗೂ ಬೇಕು ಒಂದಿಷ್ಟು ವಿಶ್ರಾಂತಿ. ಕೆಲವೊಮ್ಮೆ ಬೇಕು ಮನಕ್ಕೂ ಏಕಾಂತದ ಆಲಿಂಗನ. ತನ್ನವರೆನಿಸಿದವರೆಲ್ಲ ತೊರೆದು ದೂರವಾದಾಗ ನಮ್ಮನ್ನಾವರಿಸುವ ಈ ಏಕಾಂತಕ್ಕೆ ಬಹುಷಃ ಬಯ್ಯುವವರೇ ಜಾಸ್ತಿ. ಆದರೆ ನಿಜವಾಗಿಯೂ ಏಕಾಂತ ಎಲ್ಲವನ್ನ ಅಥವಾ ಎಲ್ಲರನ್ನ ಕಳೆದ ಸ್ಥಿತಿಯಲ್ಲ. ಅದು ಕಳೆದ ಎಲ್ಲವನ್ನ ಮತ್ತೆ ನಮಗೆ ಮರಳಿಸುವ ಅದ್ಭುತ ರಸಾನುಭವ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮನ್ನು ನಮಗೆ ಮರಳಿಸುವ ಅನುಭವ. ಏಕಾಂತದ ರಾಯಭಾರಿಯಾಗಿ ಮನಸ್ಸನ್ನು ಆವರಿಸುವುದು ಮೌನ. ಈ ರಾಯಭಾರಿ ನಡೆಸುವ ಸಫಲ ಸಂಧಾನಗಳಿಗೆ ಲೆಕ್ಕವಿಲ್ಲ. ಅದೆಷ್ಟೋ ಬಗೆಹರಿಯದ ಸಮಸ್ಯೆಗಳು ಹಾಗೂ ನಿರ್ಧಾರಗಳ ನಡುವಿನ ಜಿದ್ದಾಜಿದ್ದಿಗಳ ನಡುವೆ ರಾಯಭಾರ ನಡೆಸುವ ಈ ಮೌನ ಖಂಡಿತ ಒಂದು ಧನಾತ್ಮಕ ನಿರ್ಧಾರಕ್ಕೆ ಮನಸ್ಸನ್ನು ಒಪ್ಪಿಸುತ್ತದೆ. ಕೆಲವೊಮ್ಮೆ ಯಾವ ಸ್ನೇಹಿತನಿಂದಾಗಲಿ, ಹಿತೈಷಿಗಳಿಂದಾಗಲಿ, ಕೊನೆಗೆ ಅಪ್ಪ ಅಮ್ಮನಿಂದಲೂ ಒಪ್ಪಿಸಲಾಗದೇ ಹೋದ ನಿರ್ಧಾರಗಳಿಗೆ ಈ ಮೌನಸಂಧಾನ ಮಣಿಯುವಂತೆ ಮಾಡಿಬಿಡುತ್ತದೆ. ನಮ್ಮೊಳಗೆ ನಮ್ಮೊಂದಿಗೆ ನಮಗಾಗಿ ನಡೆಯುವ ವಿಚಾರ ಸಂಕೀರ್ಣ ಈ ಏಕಾಂತ.

ನಮ್ಮ ಸಂತೋಷದಲ್ಲಿ ದೂರ ನಿಂತು ದುಃಖದಲ್ಲಿ ನಾವು ಕರೆಯದೆ ಬರುವ ಶಾಶ್ವತ ಸಂಗಾತಿ..

ನಾವು ಏಕಾಂಗಿಯಾಗಿರುವಾಗ ನಮ್ಮ ಕ್ರೀಯಾಶೀಲರಾಗತಿವಿ ಯಾರಾದರೂ ನೀನು ಯಾರು ಎಂದಾಗ ಬಹಳ ಸುಲಭವಾಗಿ ಉತ್ತರಿಸುತ್ತೆವೆ ಅವರಿವರ ಪರಿಚಯದಿಂದ ನಮ್ಮನ್ನ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತೆವೆ.ಅದೇ ಪ್ರಶ್ನೆ ನಮ್ಮನ್ನ ನಾವೇ ಕೇಳಿಕೊಂಡಾಗ ಉತ್ತರ ಕಷ್ಟವಾಗುತ್ತದೆ ನಾನು ಯಾರು ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರ ಸಿಗುವುದು ಕಷ್ಟವೇ? ಆಗಲೇ ತಿಳಿಯಬಹುದು ನಾವು ನಮ್ಮನ್ನ ತಿಳಿಯಬೇಕಿದೆ ನಮ್ಮೊಳಗೆ ಇಳಿಯಬೇಕಿದೆ ನಾಜೂಕಿನಿಂದ ಜೀಕಬೇಕಿದೆ. ಮೌನದಿ ನನ್ನೊಳಿಗಿನ ನಾನನ್ನು ಅರಿಯಬೇಕಿದೆ. ನಾವೆಂದಾದರೂ ಸಿನಿಮಾ ಶಾಪಿಂಗ್ ಹೋಟೆಲ್  ಅಥವಾ ಪ್ರವಾಸಕ್ಕೆ ಒಬ್ಬಂಟಿಯಾಗಿ ಹೋಗಿದ್ದೆವಾ ಎಲ್ಲದಕ್ಕೂ ಜೊತೆಗೊಬ್ಬರಾದರೂ ಬೇಡವಾ ಯಾರಾದರೂ ಇದ್ದರೆ ಚನ್ನಾಗಿರುತ್ತದೆ ಮಜಾ ಇರುತ್ತದೆ ಎಂದು ಯೋಚಸುತ್ತೆವೆ. ನಮಗೆ ಸದಾ ಜೊತೆಗಾರರು ಬೇಕೆಬೇಕು. ಆದರೆ ಒಮ್ಮೆ ಯೋಚಿಸಿ ನಾವು ಒಬ್ಬಂಟಿಯಾಗಿದ್ದಾಗಲೆ ಪ್ರಕೃತಿಯ ಸೊಗಸನ್ನು  ಹೆಚ್ಚು ಸವಿಯಬಹುದು. ನಾವು ನಮ್ಮೊಡನೆ ಸಮಯ ಕಳೆದಾಗಲೆ ಹೆಚ್ಚು ಕ್ರೀಯಾಶೀಲರಾಗಿರುತ್ತೆವೆ ಹೆಚ್ಚು ನಮ್ಮನ್ನು ತಿಳಿಯುತ್ತೆವೆ ಖಾಲಿ ಕೂತಾಗ ನಮ್ಮೊಳಗೊಬ್ಬ ಕಲೆಗಾರನಿರುವ ಅವನ ಏನಾದರೊಂದು ಗೀಚುವ ಹವ್ಯಾಸಿ ಇರುವರು ಸಂಗೀತಗಾರನಿರುನಲ್ಲವೇ....ಒಬ್ಬ ಗೃಹಿಣಿ ಮನೆಯಲ್ಲಿ ಯಾರು ಇರದಾಹ  ಮನೆಯ ಎಲ್ಲ ಕೆಲಸಗಳ ಮುಗಿಸಿ ಆರಾಮವಾಗಿ ಟಿವಿ ನೋಡತಾ ಒಂದು ಕಪ್ ಕಾಫಿ ಕುಡಿಬೇಕಂತಾ ಆಸೆ ಪಡೆಯುತ್ತಾರೆ ಅಂದರೆ ಬಿಡುವಿಲ್ಲದ ಕೆಲಸಗಳು ತಮಗಾಗಿ ಒಂದಿಷ್ಟು ಸಮಯ ಬೇಕೆಂದು ಬಯಸುವುದು ಸಹಜ ಹಾಗಿದ್ದ ಮೇಲೆ ಏಕಾಂತವೂ ಹಿತವೇ ಅಲ್ಲವೇ..?

✍ ಅಂಜಲಿ ಶ್ರೀನಿವಾಸ