ಲೊರೆಟ್ಟೊ:  ಏಸುಕ್ರಿಸ್ತರರನ್ನು ಶಿಲುಬೆಗೇರಿಸುವ ಮುನ್ನಾ ದಿನವಾದ  ಇಂದು ( ಪವಿತ್ರ ಗುರುವಾರ), ಹಾಗೆಯೇ ಪರಮ ಪ್ರಸಾದ ಸಂಸ್ಕಾರವನ್ನು ಕಥೊಲಿಕ್ ಪವಿತ್ರ ಧರ್ಮಸಭೆಗೆ ಅರ್ಪಿಸಿ ತನ್ನ ಶಿಷ್ಯ ರೊಂದಿಗೆ  ಕೊನೆಯ ಔತಣ ಕೂಟದಲ್ಲಿ, ತನ್ನ12 ಮಂದಿ ಶಿಷ್ಯರ ಪಾದಗಳನ್ನು ತೊಳೆದು , ಪವಿತ್ರ ಸಭೆಗೆ ತ್ಯಾಗ, ಕ್ಷಮೆ, ಪ್ರೀತಿ ,ಸೇವೆಯ ಸಂದೇಶವನ್ನು ಸಾರುವ ಈ ಸಂದರ್ಭದಲ್ಲಿ  ಲೋರೆಟ್ಟೊ ಮಾತಾ  ಚರ್ಚ್ ನ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ರವರು ಚರ್ಚ್ ವ್ಯಾಪ್ತಿಯ 12  ನೇಮಿಸಿದ ಪ್ರತಿನಿಧಿಗಳ ಪಾದಗಳನ್ನು ತೊಳೆದು ಪವಿತ್ರ ಬಲಿ ಪೂಜೆಯನ್ನು ನೂರಾರು ಭಕ್ತಾದಿಗಳೊಂದಿಗೆ ಅರ್ಪಿಸಿ ,ದೇವರ ವಾಕ್ಯದ ಪ್ರವಚನ ನೀಡಿದರು. 

ಲೊರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯ ಪಾಧ್ಯಾಯರಾದ ವಂ. ಜೇಸನ್ ಮೊನಿಸ್ ರವರು ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ಅರ್ಪಿಸಿದರು.