24ರ ಅಜ್ವಿನ್ ಸಿ. ಎನ್. ಮತ್ತು ಆತನ ಗೆಳತಿ 22ರ ಸಪ್ನಾ ಅಲಿಯಾಸ್ ಹತೀಜಮ್ಮ ಎಂಬವರನ್ನು ಪೋಲೀಸರು ಬಂಧಿದ್ದು, ಮಾಹಿತಿಯನ್ನು ಕಮಿಶನರ್ ಶಶಿಕುಮಾರ್ ಹೊರಗಿಟ್ಟಿದ್ದಾರೆ.
ಒಂದು ಪಾರ್ಟಿಯಲ್ಲಿ ದೂರುದಾರನಿಗೆ ಪಾನೀಯದಲ್ಲಿ ಮಾದಕ ವಸ್ತು ನೀಡಿದ ಆರೋಪಿಗಳು ಆತನ 2.12 ಲಕ್ಷ ರೂಪಾಯಿ ಮೌಲ್ಯದ ಉಂಗುರ ಎಗರಿಸಿದ್ದಾರೆ.
ಮರುದಿನ ವಿಚಾರಿಸಿದಾಗ ನೀವು ಅಮಲಲ್ಲಿ ಮಾನಭಂಗದ ಯತ್ನ ಮಾಡಿದ್ದೀರಿ. ಫೋಟೋ ಜಾಲ ತಾಣಕ್ಕೆ ಅಪ್‌ಲೋಡ್ ಮಾಡುವುದಾಗಿ ಆರೋಪಿಗಳು ಹೆದರಿಸಿದ್ದಾರೆ. ದೂರುದಾರರರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನ ಮೇಲೆ ಈ ಬಂಧನ ನಡೆದಿದೆ.