ಆಜಾದ್ ಕಾಶ್ಮೀರ್ ಇಲ್ಲವೇ ಪಾಕ್ ಆಕ್ರಮಿತ ಕಾಶ್ಮೀರದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್ ಇ ಇನ್ಸಾಫ್ ಪಕ್ಷವು ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ.
45 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳಲ್ಲಿ ಅವರ ಪಕ್ಷ ಜಯ ಸಾಧಿಸಿತು. ಪಿಪಿಪಿ 11 ಕಡೆ ಗೆದ್ದರೆ ಉಳಿದೆಡೆ ಪ್ರಾದೇಶಿಕ ಪಕ್ಷಗಳು ಗೆದ್ದವು. 53 ಸದಸ್ಯ ಬಲದ ವಿಧಾನ ಸಭೆಗೆ ವಿಶಿಷ್ಟ ಕ್ಷೇತ್ರದ 8 ಜನರನ್ನು ನಾಮಕರಣ ಮಾಡಲಾಗುತ್ತದೆ.