ಮಂಗಳವಾರ ಬೆಳಿಗ್ಗೆ ನಡೆದ ಟೋಕಿಯೋ ಒಲಿಂಪಿಕ್ಸ್ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ 2-5 ಗೋಲುಗಳಿಂದ ಬೆಲ್ಜಿಯಂ ಎದುರು ಸೋತ ಭಾರತ ತಂಡವು ಇನ್ನು ಕಂಚಿಗಾಗಿ ಹೋರಾಡಬೇಕಾಗಿದೆ.
ಬೆಲ್ಜಿಯಂ ಮೊದಲ ಗೋಲು ಹೊಡೆದರೂ ಮೂರನೇ ಕ್ವಾರ್ಟರ್ ಹೊತ್ತಿಗೆ ಗೋಲು 2-2 ಸಮ ಆಗಿತ್ತು. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ 3 ಗೋಲು ಬಾರಿಸಿದ ಬೆಲ್ಜಿಯಂ ಅದ್ಭುತ ಗೆಲುವು ಪಡೆಯಿತು.