ಸೋಮವಾರದ 24 ಗಂಟೆಗಳಲ್ಲಿ ಲೋಕದಲ್ಲಿ 5.5 ಲಕ್ಷದಷ್ಟು ಹೊಸ ಸೋಂಕಿತರು ಪಾಸಿಟಿವ್ ಪಡೆದರು. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ 8.2 ಸಾವಿರದಷ್ಟು ಇತ್ತು. ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು  19,53,45,663ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 41,82,830 ದಾಟಿ ಸಾಗಿದೆ.

ಕೋವಿಡ್ ತಾನಿರುವುದನ್ನು ರಾಜ್ಯದಲ್ಲಿ ಇನ್ನೂ ಮುಚ್ಚಿಟ್ಟಿಲ್ಲ. ಸೋಮವಾರ ಪಾಸಿಟಿವ್ ಎನಿಸಿದವರ ಸಂಖ್ಯೆ 1,606. ಅಲ್ಲಿಗೆ ಒಟ್ಟು ಸೋಂಕಿತರೆನಿಸಿದವರ ಸಂಖ್ಯೆಯು 28,96,163 ದಾಟಿತು. ನಿನ್ನೆ ಕೋವಿಡ್ ಕೋವಿಗೆ ಬಲಿಯಾದವರ ಸಂಖ್ಯೆ 31. ಹಾಗಾಗಿ ರಾಜ್ಯದಲ್ಲಿ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆಯು 36,405 ದಾಟಿದೆ.

ಸೋಮವಾರದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಜನರು ಕೊರೋನ ಮೃತ್ಯುವಿಗೆ ಸೇರಿ ಹೋದರು. ನಿನ್ನೆಯ 4 ಸಾವು ಸಹಿತ ಒಟ್ಟು ಸಾವಿನ ಮೊತ್ತವು 1,397ಕ್ಕೆ ಏರಿ ಸಾಗಿದೆ. ನಿನ್ನೆಯ ದಿನದಲ್ಲಿ 357 ಜನ ಹೊಸದಾಗಿ  ಸೋಂಕು ಭಾಜನರಾದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 98,566 ದಾಟಿ ಸಾಗಿತು.

ಉಡುಪಿ ಜಿಲ್ಲೆಯಲ್ಲಿ ನಿನ್ನೆ ಕೊರೋನಾದಿಂದ 69ರ ಹಿರಿಯರೊಬ್ಬರು ಕಾಸಗಿ ಆಸ್ಪತ್ರೆಯಲ್ಲಿ  ಮರಣ ಹೊಂದಿದರು. ಜಿಲ್ಲೆಯಲ್ಲಿ ಕೋವಿಡ್ ಬಲಿ ಪಡೆದವರ ಸಂಖ್ಯೆಯು 410 ಆಯಿತು. ಸೋಮವಾರ ಪಾಸಿಟಿವ್ ಸಾಂಕ್ರಾಮಿಕ ಎನಿಸಿದವರ ಸಂಖ್ಯೆ  214. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರಾದವರ ಸಂಖ್ಯೆಯು 69,091ಕ್ಕೆ ಏರಿತು.