ಕಿನ್ನಿಗೋಳಿ: ನಾವು ಮಾಡುವ ಕೆಲಸದಿಂದ ಇನ್ನೊಬ್ಬರಿಗೆ ಮೆಚ್ಚುವಂತಾಗಿರಬೇಕು ಹಾಗೂ ಶಕ್ತಿಯುತ ಸಮುದಾಯವನ್ನು ಕಟ್ಟುವಂತ ಕೆಲಸ ಮಾಡಬೇಕು. ಸಮಾಜ ಸೇವೆಯಲ್ಲಿ ತೊಡಗಿ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮೊನ್ಸಿಂಜೆರ್ ಮ್ಯಾಕ್ಸಿಮ ನೊರೋನ್ಹಾ ವಿಗರ್ ಜನರಲ್ ಮಂಗಳೂರು ಧರ್ಮ ಪ್ರಾಂತ್ಯ ಅವರು ಹೇಳಿದರು.
ಅವರು ರೆಮೆದಿಯಸ್ ಅಮ್ಮನವರ ದೇವಾಲಯದ ಸಭಾಭವನದಲ್ಲಿ ಭಾರತೀಯ ಕಥೋಲಿಕ ಯುವ ಸಮ್ಮೇಳನ್ ಐಸಿ ವೈ ಎಂ ಕೇಂದ್ರೀಯ ಸಮಿತಿ ಮಂಗಳೂರು ಮತ್ತು ಸಂತ ಜೂದ್ ಐಸಿ ವೈ ಎಂ ಮಂಗಳೂರು ಉತ್ತರ ವಲಯ ಹಾಗೂ ಐಸಿ ವೈ ಎಂ ಕಿರೆಂ ಘಟಕದ ವತಿಯಿಂದ ನಡೆದ ಧರ್ಮ ಪ್ರಾಂತ್ಯದ ಯುವ ಸಮ್ಮೇಳನ ಡಿ ವೈ ಸಿ 2023 ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
2001ರಲ್ಲಿ ಪ್ರಥಮ ಬಾರಿಗೆ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ದಾಮಸ್ ಕಟ್ಟೆಯ ರೆಮೆದಿಯಸ್ ಅಮ್ಮನವರ ದೇವಾಲಯದಲ್ಲಿ ಉಲ್ಲಾಸ್ ಫೆರ್ನಾಡಿಸ್ ಇವರ ಅಧ್ಯಕ್ಷ ಸ್ಥಾನದಲ್ಲಿ ಹಾಗೂ ಬರ್ಟನ್ ಸಿಕ್ವೇರ ಇವರ ಮಾರ್ಗದರ್ಶನದಲ್ಲಿ ಪ್ರಥಮ ಬಾರಿಗೆ ನಡೆದಿದ್ದು 22 ವರ್ಷದ ಬಳಿಕ ಮಗದೊಮ್ಮೆ ಡಿ ವೈ ಸಿ ದಾಮಸ್ ಕಟ್ಟೆಯ ರೆಮೆದಿಯಸ್ ಅಮ್ಮನವರ ದೇವಾಲಯದಲ್ಲಿ ನಡೆದಿದೆ . ಕಾರ್ಯಕ್ರಮವು ಫೆಬ್ರವರಿ 17 ರಿಂದ ಪ್ರಾರಂಭಗೊಂಡು ಫೆಬ್ರವರಿ 19 ಸಂಜೆ 5:00 ತನಕ ಭಾರತೀಯ ಕಥೋಲಿಕ ಯುವ ಸಮ್ಮೇಳನ್ ಕೇಂದ್ರೀಯ ಸಮಿತಿ ಮಂಗಳೂರು ಧರ್ಮ ಪ್ರಾಂತ್ಯ ನಿರ್ದೇಶಕರು ಫಾ ಅಶ್ವಿನ್ ಕಾರ್ಡೋಜ, ಅನಿಲ್ ಸಿಕ್ವೇರ ಬೋರಿಮಾರ್, ಅಧ್ಯಕ್ಷರು ನಿಶಾಲ್ ಡಿಸೋಜಾ, ಕಾರ್ಯದರ್ಶಿ. ಸಂತ ಜೂದ್ ಐಸಿ ವೈ ಎಂ ಮಂಗಳೂರು ಉತ್ತರ ವಲಯ ಅಧ್ಯಕ್ಷರು ಮಾರ್ವೆಲ್ ಮತಾಯಸ್, ಐಸಿ ವೈ ಎಂ ಕಿರೆಂ ಘಟಕದ ಅಧ್ಯಕ್ಷರು ಜಸ್ವಿನ್ ಡಿಸಿಲ್ವಾ ಮತ್ತು ಸದಸ್ಯರ ಸಹಕಾರದಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ವಿಶೇಷ ಸಮಾಜ ಸೇವೆ ನೀಡಿರುವ ಜೇಸನ್ ಲಾರೆನ್ಸ್ ಕ್ರಾಸ್ತ ಹಾಗೂ ವಿಯೋಲಾ ರೇಷ್ಮಾ ಲೂವಿಸ್, ಅವರು ಕರ್ನಾಟಕ ಯುವ ಆಯೋಗದಿಂದ ಕರ್ನಾಟಕ ಯುವರತ್ನ ಪ್ರಶಸ್ತಿ 2023 ಗುರುತಿಸಿ ನೀಡಿರುತ್ತಾರೆ. ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೆಮೆದಿಯಸ್ ಅಮ್ಮನವರ ದೇವಾಲಯದ ಪ್ರಧಾನ ಧರ್ಮ ಗುರುಗಳು ಮತ್ತು ಸಂತ ಜೂದ್ ಮಂಗಳೂರು ಉತ್ತರ ವಲಯದ ಪ್ರಧಾನ ಧರ್ಮ ಗುರುಗಳಾದ ವಂದನೇಯ ಫಾ ಓಸ್ವಾಲ್ಡ್ ಮೊಂತೆರೋ , ಸಂತ ಜೂದ್ ಮಂಗಳೂರು ಉತ್ತರ ವಲಯ ಐಸಿಐಎಂ ನಿರ್ದೇಶಕರಾದ ವಂದನೆಯ ಫಾ ಸುನಿಲ್ ಡಿಸೋಜ, ಫಾ ಅಶ್ವಿನ್ ಕಾರ್ಡೋಜ ಐಸಿವೈಯಂ ನಿರ್ದೇಶಕ ಕೇಂದ್ರೀಯ ಸಮಿತಿ ಮಂಗಳೂರು ಧರ್ಮ ಪ್ರಾಂತ್ಯ, ಮೊನ್ಸಿಂಜೆರ್ ಜೆರಾಲ್ ಮ್ಯಾಕ್ಸಿಮ್ ನೊರೋನ್ಹಾ ವಿಗಾರ್ ಜೆರಾಲ್ ಮಂಗಳೂರು ಧರ್ಮ ಪ್ರಾಂತ್ಯ, ಬರ್ಟನ್ ಸಿಕ್ವೇರ ಕೇಂದ್ರ ಸಮಿತಿಯ ಮಾಜಿ ಕೋಶಾಧಿಕಾರಿ, ಆಲ್ವೀನ್ ಪತ್ರಾವೊ ಮಾಜಿ ಅಧ್ಯಕ್ಷರು ಕೇಂದ್ರೀಯ ಸಮಿತಿ ಮಂಗಳೂರು ಧರ್ಮ ಪ್ರಾಂತ್ಯ, ಮೆರ್ಲಿಡಾ ಮಾಜಿ ಅಧ್ಯಕ್ಷರು ಕೇಂದ್ರೀಯ ಸಮಿತಿ ಮಂಗಳೂರು ಧರ್ಮಪ್ರಾಂತ್ಯ, ಜೇಮ್ಸ್ ಲೋಬೋ ಕಾರ್ಯದರ್ಶಿ ಕಿರೆಂ ಪಾಲನ ಮಂಡಳಿ, ರೋಹನ್ ಡಿಕೋಸ್ತಾ ಉಪಾಧ್ಯಕ್ಷರು ಕಿರೆಂ ಪಾಲನ ಮಂಡಳಿ, ಅನಿಲ್ ಸಿಕ್ವೇರ ಬೋರಿಮಾರ್ ಅಧ್ಯಕ್ಷರು ಕೇಂದ್ರಿಯ ಸಮಿತಿಯ, ವಿಲ್ಸನ್ ಸಿಕ್ವೇರ ಹೊಸ್ಪೆಟ್ ಉಪಾಧ್ಯಕ್ಷರು ಕೇಂದ್ರಿಯ ಸಮಿತಿ, ಡೆಲ್ಟಿಯಾ ಪಿರೇರಾ, ಮಹಿಳಾ ಉಪಾಧ್ಯಕ್ಷೆ ಕೇಂದ್ರಿಯ ಸಮಿತಿ,ನಿಶಾಲ್ ಡಿಸೋಜಾ, ಜನರಲ್ ಕಾರ್ಯದರ್ಶಿ ಕೇಂದ್ರಿಯ ಸಮಿತಿ ಎಲ್ರಿಕ್ ಡಿಸಿಲ್ವಾ ಜತೆ ಕಾರ್ಯದರ್ಶಿ ಕೇಂದ್ರಿಯ ಸಮಿತಿ ಮಿಲ್ಸ್ಟನ್ ನೊರೋನ್ಹಾ ಅಡಿಟಾರ್ ಕೇಂದ್ರಿಯ ಸಮಿತಿ ಪಿಲೋಮಿನಾ ಫೆರ್ನಾಂಡಿಸ್ ಪ.ಆರ್ ಓ ಕೇಂದ್ರೀಯ ಸಮಿತಿ ಜೋಯಲ್ ಲ್ಯಾನ್ಸಿ ಕ್ರಾಸ್ತ ಅಮ್ಚೋ ಯುವಕ್ ಕೇಂದ್ರೀಯ ಸಮಿತಿ ಸುಶಾಂತ್ ಫೆರ್ನಾಂಡಿಸ್ ಸದಸ್ಯರು ಕೇಂದ್ರೀಯ ಸಮಿತಿ ಮಂಗಳೂರು ಧರ್ಮ ಪ್ರಾಂತ್ಯ ಸೆಲಿಟಾ ಡಿಸೋಜ ಟೆರೆನ್ಸ್ ಕ್ರಾಸ್ತ ಪ್ರಾಂತ್ಯ ಉಪಾಧ್ಯಕ್ಷ ಜೇಸನ್ ಲಾರೆನ್ಸ್ ಕ್ರಾಸ್ತ ವಿಯೋಲಾ ರೇಷ್ಮಾ ಲೂವಿಸ್ , ಜಸ್ವಿನ್ ಡಿಸಿಲ್ವಾ, ವಿಶಾಲ್ ಮಿರಂದ, ಮಾರ್ವೆಲ್ ಮತಾಯಸ್ ಮತ್ತು ಲಿಸ್ಟರ್ ಲಸ್ರಾದೊ ಮತ್ತು ಇತರರು ಉಪಸ್ಥಿದ್ದರು.