ಬಂಟ್ವಾಳ: ಸಿದ್ದಕಟ್ಟೆಯ ಬಾರವೊಂದರಲ್ಲಿ ಪೂರ್ತಿ ಕಸ ತುಂಬಿದ ಬಿಯರ್ ಬಾಟಲ್ ಪತ್ತೆಯಾಗಿದೆ. ಗ್ರಾಹಕರು ಕಂಪೆನಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಿಯರ್ ಬಾಟಲಿನಲ್ಲಿ ಕಸ ತುಂಬಿರುವ ಘಟನೆ ಗ್ರಾಹಕರು ಸಂಬಂಧಪಟ್ಟ ಇಲಾಖೆಗೆ ದೂರು ಕೊಡಲು ಒತ್ತಾಯಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಕಂಪೆನಿಯವರು ಬಾರ್ ಗೆ ಆಗಮಿಸಿ ಗ್ರಾಹಕಾರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಂಪೆನಿಯವರು ಈ ವಿಷಯವನ್ನು ಬಹಿರಂಗ ಪಡಿಸಬೇಡಿ, ನಾವು ಎಕ್ಸ್ಟ್ರಾ ಒಂದು ಬಿಯರ್ ಬಾಕ್ಸ್ ಕೊಡುತ್ತೇವೆ ಎಂದು ಹೇಳಿ ಆ ಬಾಟಲನ್ನು ವಾಪಾಸ್ ತಗೊಂಡು ಹೋಗಿದ್ದಾರೆ ಎನ್ನಲಾಗಿದೆ.