ರಾಜಸ್ತಾನದ ಭರತ್‌ಪುರ ಜಿಲ್ಲೆಯಿಂದ ಇಬ್ಬರನ್ನು ಅಪಹರಿಸಿದ ಗೋರಕ್ಷಕ ಅಯೋಗ್ಯರು ಹರಿಯಾಣದ ಭೀವಂಡಿ ಜಿಲ್ಲೆಯಲ್ಲಿ ಕಾರಿನಲ್ಲೇ  ಸುಟ್ಟು ಕೊಂದಿರುವ ಘೋರ ಘಟನೆ ವರದಿಯಾಗಿದೆ.

ಸಾವಿಗೀಡಾದ ದುರ್ದೈವಿಗಳು ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ಯುವಕರು. ಅಪಹರಣ ನಡೆದ ಕೆಲವು ಗಂಟೆಗಳ ಬಳಿಕ ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋತ್ ಘಟನೆಯನ್ನು ಖಂಡಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ಪೋಲೀಸರಿಗೆ ತಿಳಿಸಿದ್ದಾರೆ. 

ರಾಜಸ್ತಾನ ಪೋಲೀಸರು ಲೋಕೇಶ್, ರಿಂಕು ಸೈನಿ, ಶ್ರೀಕಾಂತ್, ಮೋನು‌ ಮನೇಸರ್ ಎಂಬ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ಯಾಕ್ಸಿ ಚಾಲಕ ರಿಂಕು ಸೈನಿಯನ್ನು ಹರಿಯಾಣದ ಫಿರೋಜ್ಪುರ ಜಿಲ್ಲೆಯಿಂದ ಬಂಧಿಸಿ ತರಲಾಗಿದೆ. ಈತನು ಗೋರಕ್ಷಕ ಚಟುವಟಿಕೆಯಲ್ಲಿ ಈಗಾಗಲೇ ಕುಖ್ಯಾತನಾಗಿದ್ದ.