ಮಂಗಳೂರು: ಸ್ಟೇಟ್ ಬ್ಯಾಂಕ್ ಬಳಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಏಳು ದಿನ ಇರಬಹುದಾದ ಹಸುಗೂಸೊಂದು ನಿನ್ನೆ ಮಧ್ಯಾಹ್ನ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.
ಬಸ್ ನಿರ್ವಾಹಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಂಡೇಶ್ವರ ಪೋಲೀಸರು ಮಗುವಿಗೆ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದ್ದಾರೆ. ಮಗು ಒಂದು ವಾರದ್ದು, ಮಗುವಿನ ತಲೆಯಲ್ಲಿ ಸಣ್ಣ ಗಾಯ, ಮೂಗಿನಲ್ಲಿ ಟ್ಯೂಬ್ ಇತ್ತು. ಫಿಟ್ಸ್ ಇರುವುದು ಕೂಡ ಗೊತ್ತಾಗಿದೆ ಎಂದು ಲೇಡಿ ಗೋಶನ್ ಆಸ್ಪತ್ರೆಯ ಡಾ. ಬಾಸಿತ್ ತಿಳಿಸಿದ್ದಾರೆ.