ಕರ್ನಾಟಕದಲ್ಲಿ  ಈ ಬಾರಿ  ಪ್ರತಿಯೊಂದು ಕ್ಷೇತ್ರಗಳ ಅಭಿವೃದ್ಧಿಗಳಿಗೆ ವಿಶೇಷ ಯೋಜನೆಗಳ ಮೂಲಕ  ಸರ್ವ ಸ್ಪರ್ಶಿ ಬಜೆಟ್ ನೀಡಿದ ಸನ್ಮಾನ್ಯ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರನ್ನು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ಅಭಿನಂದಿಸಿದರು. ಕೃಷಿ ಕ್ಷೇತ್ರ, ನೀರಾವರಿ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ನಗರಾಭಿವೃದ್ಧಿ, ಗ್ರಾಮಾಭಿವೃದ್ಧಿಗಳಿಗೆ ವಿಶೇಷ ಯೋಜನೆಗಳು, ಹಾಗು ನಮ್ಮ ಧರ್ಮ,ಸಂಸ್ಕೃತಿ, ಪರಂಪರೆಯ ಕೇಂದ್ರಗಳಾಗಿರುವ ಮಠ ಮಂದಿರಗಳ ಅಭಿವೃದ್ದಿಗಳಿಗೆ ಯೋಜನೆ ನೀಡಿದ್ದು ಶ್ಲಾಘನೀಯ ಎಂದರು.