ಆರು ಪ್ರಾಯಕ್ಕಿಂತ ಮೇಲಿನ ಭಾರತೀಯರಲ್ಲಿ 67.6 ಶೇಕಡಾ ಜನರು ಕೊರೋನಾ ನಿರೋಧಕ ಪ್ರತಿಕಾಯಗಳನ್ನು ಹೊಂದಿರುವರು ಎಂದು ಐಸಿಎಂಆರ್- ಭಾರತೀಯ ಆರೋಗ್ಯ ಸಂಶೋಧನಾ ಮಂಡಳಿ ಹೇಳಿದೆ.

ಜೂನ್ 14ರಿಂದ ಜುಲಾಯಿ 6ರವರೆಗೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಇದು ಸ್ಪಷ್ಟಗೊಂಡಿದೆ. ಸರ್ವೆಯಲ್ಲಿ ಭಾಗವಹಿಸಿದ 85.2 ಶೇಕಡಾ ಜನರು ಕೊರೋನಾ ನಿರೋಧಕ ಆಗಿದ್ದರು. ಅವರಲ್ಲಿ ಲಸಿಕೆ, ಇತರ ಔಷಧಿ ಪಡೆದವರನ್ನು ಲೆಕ್ಕ ಹಾಕಿ, 67.6 ಶೇಕಡಾ ಭಾರತೀಯರು ಪ್ರತಿಕಾಯ ಸಂಪನ್ನರು ಎಂಬ ತೀರ್ಮಾನಕ್ಕೆ ಬರಲಾಗಿದೆ.