ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರು ಪೆಗಾಸಸ್ ಗೂಢಚಾರಿಕೆ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ತಂದಿದ್ದಾರೆ. ಆದ್ದರಿಂದ ಅವರದು ದೇಶದ್ರೋಹದ ಕೃತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಪಾದಿಸಿದರು.
ಸಂಸತ್ ಭವನದ ಬಳಿಯ ಗಾಂಧಿ ಪ್ರತಿಮೆಯೆದುರು ಶುಕ್ರವಾರ ಕಾಂಗ್ರೆಸ್ ಪಕ್ಷದವರು ಪೆಗಾಸಸ್ ವಿರುದ್ಧ ಪ್ರತಿಭಟನೆ ನಡೆಸಿದಾಗ ರಾಹುಲ್ ಗಾಂಧಿಯವರು ಹೀಗೆ ಹೇಳಿದರು. ಬಿಜೆಪಿ ಆಡಳಿತವು ಮೋದಿ, ಶಾ ಕಯ್ಯಲ್ಲಿ ದೇಶವನ್ನು ದುರ್ಬಲವಾಗಿಸಿದೆ ಎಂದು ಅವರು ಹೇಳಿದರು.