ಹಾಲಿ ಕೃಷಿ ಮಂತ್ರಿ ಬಿ. ಸಿ. ಪಾಟೀಲರು ಇಸ್ರೇಲ್ ಮಾದರಿ ನೀರಾವರಿ ಯೋಜನೆ ರದ್ದು ‌ಪಡಿಸಿರುವುದನ್ನು ಖಂಡಿಸಿ ಜೆಡಿಎಸ್ ಸದಸ್ಯರು ‌ವಿಧಾನ ಸಭೆಯಲ್ಲಿ ಪ್ರತಿಭಟನೆ ಮಾಡಿದರು.

ಹಲವು ಜೆಡಿಎಸ್ ಸದಸ್ಯರು ಸದನದ ತಗ್ಗಿಗೆ (ಬಾವಿಗೆ) ಇಳಿದು ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದರು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇಸ್ರೇಲ್ ಮಾದರಿ ‌ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸಚಿವ ಪಾಟೀಲರು ಉತ್ತರಿಸಿತ್ತ ಈ ಯೋಜನೆಗೆ ನೀಡಿದ ಹಣ ಎಲ್ಲಿಗೆ ಹೋಯಿತು ಎಂದು ಲೆಕ್ಕ ಸಿಗುತ್ತಿಲ್ಲ. ಹಾಗಾಗಿ ಯೋಜನೆ ರದ್ದು ಪಡಿಸಲಾಯಿತು ಎಂದರು.

ಜೆಡಿಎಸ್ ನ ಗುರುಮಿಟ್ಕಲ್ ಶಾಸಕ ನಾಗನಗೌಡ ಕಂದಕೂರ‌ ಅವರು‌‌ ಈ ಬಗೆಗೆ ಲಿಖಿತ ಮಾಹಿತಿ ಕೇಳಿದರು.

2018- 19ರ‌ ಬಜೆಟ್ಟಿನಲ್ಲಿ ರೂ.  150 ಕೋಟಿ ಕೋಟಿ ಈ ಯೋಜನೆಗೆ ನಿಗದಿ ಮಾಡಲಾಯಿತು. ಆದರೆ ಕಂದಾಯ ಇಲಾಖೆಯು ಹಣ ವರ್ಗಾಯಿಸಿಲ್ಲ. ಉತ್ತರಕ್ಕೆ ಸಿಟ್ಟುಗೊಂಡ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಯೋಜನೆಯನ್ನು ಗುಜರಿಗೆ ಹಾಕಿರುವುದರ ವಿರುದ್ಧ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಸಮಾಧಾನ ಪಡಿಸಿ ಶಾಸಕರು ತಮ್ಮ ಸ್ಥಾನಕ್ಕೆ ಹಿಂತಿರುಗಲು ಕೇಳಿಕೊಂಡರು. ನಿಜ, ನಿಧಿ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಒದಗಿಸಿಲ್ಲ. ಮುಖ್ಯಮಂತ್ರಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಸವದಿ ಆಶ್ವಾಸನೆ ನೀಡಿದರು.