ಮಂಗಳೂರು: ಮಾರ್ಚ್ 17ರಂದು ದಕ್ಷಿಣ ಕನ್ನಡ ಜಿಲ್ಲೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಸೆಂಚುರಿಯನ್ ಆಶ್ರಯದಲ್ಲಿ ರಾವ್ ಆಂಡ್ ರಾವ್ ವೃತ್ತದ‌ ಸಿಟಿ ಟವರ್ ಇಲ್ಲಿ ಬೃಹತ್ ರಕ್ತ ದಾನ ಶಿಬಿರ ನಡೆಯಿತು.

ವೈ. ಪಿ. ಎಲ್. ಅಹ್ಮದ್ ಮೊಯ್ದಿನ್ ಲೆಬ್ಬೈ ಅಲಿಯಾಸ್ ಹಜರತ್ ಬಿಸ್ಮಿಲ್ಲಾ ಮತ್ತುಪೇಟೈ ಅವರು ಶಿಬಿರವನ್ನು ಉದ್ಘಾಟಿಸಿ ಜೀವ ದಾನಕ್ಕೆ ನೆತ್ತರು ದಾನವೇ ಉತ್ತಮ ಎಂದು ರಕ್ತ ದಾನಿಗಳಿಗೆ ಶುಭ ಕೋರಿದರು.


ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ವೈದ್ಯಕೀಯ ಅಧಿಕಾರಿ ಡಾ. ಜೆ. ಎನ್. ಭಟ್, ಲಯನ್ಸ್ ವಲಯ ಅಧ್ಯಕ್ಷೆ ಗೀತಾ ಆರ್ ಶೆಟ್ಟಿ, ದ. ಕ. ಬೀದಿ ಬದಿ ವ್ಯಾಪಾರಿಗಳ ಗೌರವಾಧ್ಯಕ್ಷರಾದ ಬಿ. ಕೆ. ಇಮ್ತಿಯಾಜ್, ಗ್ರೂಪ್ ಆಫ್ ತಾಜ್ ಇದರ ಅಧ್ಯಕ್ಷ ಸಾದಿಕ್‌ ಮುಖ್ಯ ಅತಿಥಿಗಳಾಗಿ ಕಾಣಿಸಿಕೊಂಡರು.

ವಾಯ್ಸ್ ಆಫ್‌ ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷರಾದ ಅಬ್ದುಲ್‌ ರವೂಫ್ ಅಧ್ಯಕ್ಷತೆ ವಹಿಸಿದ್ದರು. ಸಾವು ಬದುಕಿನ ನಡುವೆ ಹೋರಾಡುತ್ತಿರುವವರನ್ನು ಬದುಕುಳಿಯುವಂತೆ ಮಾಡಲು ‌ಮನುಷ್ಯ ಮಾಡುವ ದಾನಗಳಲ್ಲಿ ರಕ್ತ ದಾನವೇ ಅತ್ಯುತ್ತಮವಾದ ದಾನವಾಗಿದೆ ಎಂದು ಅವರು ಕರೆ ಕೊಟ್ಟರು.