ಕುಂಥು ಗಿರಿ, ಅಳತೆ ಗ್ರಾಮ, ಹತ ಕನಗಲೆ, ಕೊಲ್ಲಾಪುರ  ಇಲ್ಲಿ ಕುಂಥು ಗಿರಿ ಕ್ಷೇತ್ರ ಪ್ರವರ್ತಕ  75ವರ್ಷ ತುಂಬಿದ 108 ಆಚಾರ್ಯ ಕುಂಥು ಸಾಗರ ಮುನಿ ವರ್ಯರ ಅಮೃತ ಮಹೋತ್ಸವ ಕಾರ್ಯಕ್ರಮ ದಲ್ಲಿ ಡಿಸೆಂಬರ್ 31 ರಂದು  ಮೂಡುಬಿದಿರೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮಿಜಿಗಳು ಪಾಲ್ಗೊಂಡು  ಆಚಾರ್ಯ ಕುಂಥು ಸಾಗರ್ ಮುನಿವರ್ಯರಿಗೆ ವಿನಯಾಂಜಲಿ ಸಲ್ಲಿಸಿದರು.

ಆಚಾರ್ಯ ಕುಂಥು ಸಾಗರ ರು 1980 ರಲ್ಲಿ ಆಚಾರ್ಯ ರಾಗಿ ಆಚಾರ್ಯ ವಾತ್ಸಲ್ಯ ರತ್ನಕರ  ವಿಮಲ ಸಾಗರ ಮುನಿ ವರ್ಯ ರಿಂದ ದೀಕ್ಷೆ ಪಡೆದು ತಪೋ ನಿರತ ರಾಗಿ ದೇಶ ದೆಲ್ಲೆಡೆ ಬರಿ ಗಾಲಿನ ತೀರ್ಥ ಯಾತ್ರೆ ಕೈಗೊಂಡು ಪ್ರಭಾವನೆ ಮಾಡಿದ್ದಾರೆ,300 ಕ್ಕೂ ಮಿಕ್ಕಿ ಮಹಾನು ಬಾವರು  ಸಾಧು ಗಳು ಆಗಲು ಪ್ರೇರಣೆ ನೀಡಿ ದವರು ಎಂದು ಮೂಡುಬಿದಿರೆ ಶ್ರೀ ಗಳು ನುಡಿ ನಮನ ಅರ್ಪಿಸಿ  ಸಮಸ್ತ ಸರ್ವ ಸಂತ ರ ಪರವಾಗಿ ನೆರೆದ ಭಕ್ತ ವೃ0ದ ದ ಜಯ ಘೋಷ ದ ಮಧ್ಯೆ *ಜಗದ್ಗುರು* ಉಪಾದಿ ಯನ್ನು ನೀಡಿ ಗೌರವಿಸಿ ಆಶೀರ್ವಾದ ಪಡೆದರು ಮೂರು ದಿನ ಪರ್ಯಂತ  ನವಗ್ರಹ ತೀರ್ಥ ವರೂರು ಹುಬ್ಬಳ್ಳಿ ಗುಣದರ ನಂದಿ, ನಮೋಕಾರ ತೀರ್ಥ, ನಾಸಿಕ್ ಮಹಾರಾಷ್ಟ್ರ ದ ಆಚಾರ್ಯ  ದೇವ ನಂದಿ ಮುನಿ ವರ್ಯ ರು ಆಯೋಜಿಸಿದ ಅಂತ ರಾಷ್ಟ್ರೀಯ ಆನ್ ಲೈನ್ ಧಾರ್ಮಿಕ ಸಂದೇಶ ಸಂತ ಸಮಾವೇಶ ದಲ್ಲಿ ಪಾಲ್ಗೊಂಡರು.

ಕುಶಾಗ್ರ ನಂದಿ, ಗುಪ್ತಿ ನಂದಿ ಸಹಿತ 75 ಸಂತರು  ಶ್ರೀ ಡಿ ವೀರೇಂದ್ರ ಹೆಗ್ಗಡೆ, ಶ್ರೀ ಶ್ರೀ ರವಿ ಶಂಕರ್ ಗುರೂಜೀ,ರಾಮ್ ದೇವ್ ಬಾಬಾ, ಲೋಕೇಶ್ ಮುನಿ  ಸಾದ್ವಿ ಋತುoಬರ, ಸುತ್ತೂರು ಸ್ವಾಮಿ ಜೀ, ವಚನಾ ನಂದ ಸ್ವಾಮಿ ಜೀ , ಜೈನ ಸಮಾಜ ದ ಪ್ರಮುಖ ರಾದ ರಾಷ್ಟ್ರೀಯ ಶ್ರೀ ದಿಗಂಬರ ಮಹಾ ಸಮಿತಿ ಅಧ್ಯಕ್ಷ ಮಣಿಂದ್ರ ಜೈನ್, ಹಸ್ಮುಖ್ ಗಾಂಧಿ, ಅರ್. ಕೆ ಜೈನ್, ಶಿಖರ ಚಂದ ಪಹಾ ಡಿಯ ,ಮೊದಲಾದ ವರು ಪಾಲ್ಗೊಂಡು ವಿನಯಾಂಜಲಿ ಸಂದೇಶ ನೀಡಿದರು ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.