ಬೆಂಗಳೂರು ಕಾಮಾಕ್ಷಿಪಾಳ್ಯ ಪೋಲೀಸು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್ 27ರ ನೇತ್ರಾ ಅವರು, ಪೀಣ್ಯ ಸಂಚಾರ ಠಾಣೆಯ ಮಂಜುನಾಥರನ್ನು ಪ್ರೀತಿಸಿ ಮದುವೆಯಾಗಿದ್ದರು, ಆದರೆ ಬಹುಬೇಗ ನೇಣಿಗೆ ಕೊರಳೊಡ್ಡಿದ್ದಾರೆ.
ಹಿರಿಯರು ಒಪ್ಪಿ ಮದುವೆಯಾಗಿತ್ತು. ಮದುವೆಯಾದ ಬಳಿಕ ದಂಪತಿ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ನಿನ್ನೆ ನೇತ್ರಾ ತಾಕೊಲೆ ಮಾಡಿಕೊಂಡರು. ಮಂಜುನಾಥ ಹಣಕ್ಕೆ ಒತ್ತಡ ಹಾಕಿದ್ದೇ ಮಗಳ ಅಂತ್ಯಕ್ಕೆ ಕಾರಣ ಎಂದು ಆಕೆಯ ಮನೆಯವರು ದೂರು ದಾಖಲಿಸಿದ್ದಾರೆ.