ಅನ್ನ ಉತ್ಸವದ ಅಕ್ಕಿ ಚೀಲದ ಮೇಲೆ ಮೋದಿ ಚಿತ್ರ ಮುದ್ರಿಸಿರುವುದರ ವಿರುದ್ಧ ಮಧ್ಯ ಪ್ರದೇಶ ರಾಜ್ಯದ ಪ್ರತಿಪಕ್ಷಗಳವರು ಪ್ರತಿಭಟನೆ ನಡೆಸಿದರು.
ಆಗಸ್ಟ್ 7ರಂದು ಅನ್ನ ಉತ್ಸವ ನಡೆಯಲಿದ್ದು, ಪ್ರಧಾನಿ ದಿಟಸಮ ಕಾರ್ಯಕ್ರಮದ ಮೂಲಕ ಅದನ್ನು ಉದ್ಘಾಟನೆ ಮಾಡುವರು. ಅಂದು ಮಧ್ಯ ಪ್ರದೇಶದ 25,435 ಪಡಿತರ ಅಂಗಡಿಗಳಲ್ಲಿ ಒಂದೊಂದರಲ್ಲಿ 100 ಚೀಲದಂತೆ ಅಕ್ಕಿ ನೀಡುವರು. ಆ ಚೀಲ ಈಗ ಮೋದಿ ಪ್ರಚಾರಕ್ಕೆ ಬಳಕೆ ಆಗುತ್ತಿರುವುದು ಪ್ರತಿಭಟನೆಗೆ ಕಾರಣವಾಗಿದೆ.