ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದವರು ನಡೆಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2024 ರ ಮೂರನೇ ದಿನದ ಕಾರ್ಯಕ್ರಮ ನಡೆಯಿತು. 

ಗುಜರಾತ್ ನ ಒಸ್ಮಾನ್ ಮೀರ್, ಅಮೀರ್ ಒಸ್ಮಾನ್, ಭಾರತೀ ವ್ಯಾಸ್ ಹಾಗೂ ತಂಡದವರು ಸುಮಾರು 2 ಗಂಟೆಗಳ ಕಾಲ ವಿವಿಧ ಸಂಗೀತ ಲಹರಿಗಳೊಂದಿಗೆ ಕೇಳುಗರನ್ನು ರಂಜಿಸಿ ಚಪ್ಪಾಳೆಯೊಂದಿಗೆ ಪ್ರೇರೇಪಿಸಿದರು. ತೇರಿ ಯಾದ್ ಸಾತ್ ಹೈ ಸಂಗೀತದೊಂದಿಗೆ ಪ್ರಾರಂಭವಾದ ಗಾಯನ ವಿವಿಧ ವೈವಿಧ್ಯಮಯ ಹಾಡುಗಳನ್ನು ಸೇವಿಸುತ್ತಾ ಕೊನೆಯದಾಗಿ ಮಾ ತುಜೆ ಸಲಾಂ ಪದ್ಯದೊಂದಿಗೆ ಎಲ್ಲ ಮೊಬೈಲು ದೀಪವನ್ನು ಬೆಳಗಿಸಿ ಆರತಿಯಂತೆ ಎತ್ತಿ ಭಾರತ್ ಮಾತಾ ಕಿ ಜೈಕಾರದೊಂದಿಗೆ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿದರು. 

ತರುವಾಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿಯವರು ಗುಜರಾತ್ ನ ತಂಡದ ಎಲ್ಲರಿಗೂ ಪ್ರಸಾದ ವಿತರಿಸಿ ಆಶೀರ್ವಚನ ಗೈದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಹಾಗೂ ಇತರರು ಹಾಜರಿದ್ದರು.