ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಸ್ಥಳೀಯ ತಾಲೂಕು ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆ ಜನವರಿ 15ರಂದು ತಾಲೂಕು ತಹಸಿಲ್ದಾರರ ಕಚೇರಿಯಲ್ಲಿ ನಡೆಯಿತು. ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ತಹಸಿಲ್ದಾರ ಪ್ರದೀಪ್ ಹುರ್ಡೇಕರ್ ಕಾರ್ಯಕ್ರಮದ ರೂಪುರೇಷೆವನ್ನು ಪ್ರಸ್ತುತ ಪಡಿಸಿದರು. 

ಸಭೆಯಲ್ಲಿ ಶಿಕ್ಷಣ ಇಲಾಖೆಯ ವಿರುಪಾಕ್ಷಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ, ಸಿ ಡಿ ಪಿ ಅಧಿಕಾರಿ ಶೈಲಜಾ, ಪುರಸಭಾ ಮುಖ್ಯಾಧಿಕಾರಿ ಇಂದು, ಪೊಲೀಸ್ ಇಲಾಖೆಯ ಕೃಷ್ಣಪ್ಪ, ನವೀನ, ಮೆಸ್ಕಾಂ ನ ಮುರಳಿಧರ್, ರೆವೆನ್ಯೂ ಇನ್ಸ್ಪೆಕ್ಟರ್ ಮಂಜುನಾಥ, ಆರೋಗ್ಯ ಇಲಾಖೆಯ ಶಾಂತಮ್ಮ, ವಿವಿಧ ಸಂಘ ಸಂಸ್ಥೆ, ಶಾಲೆ, ಕಾಲೇಜುಗಳ ಮುಖ್ಯಸ್ಥರು, ಪ್ರತಿನಿಧಿಗಳು ಹಾಜರಿದ್ದರು. ಬೆಳಗ್ಗೆ ಗಂಟೆ 8 ರಿಂದ 9ರ ತನಕ ವಿವಿಧ ಕಾರ್ಯಕ್ರಮಗಳು ತಾಲೂಕು ಕಚೇರಿ, ಸ್ವರಾಜ್ಯ ಮೈದಾನದ ಪರಿಸರದಲ್ಲಿ ನಡೆಯಲಿದೆ ಎಂದು ತಿಳಿಸಲಾಯಿತು.