ಪದಗಳಿಗೆ ಸಿಗದ ಗುಣದವನು
ಪ್ರೀತಿಯ ಗಣಿ ನನ್ನವನು

ನಿರೀಕ್ಷೆಗಳಿರದ ನನ್ನ ಬದುಕಿಗೆ
ಬಣ್ಣದ ಕನಸುಗಳ ನೀಡಿದವನು

ಮಾತಲ್ಲೆ ಮನವ ಗೆದ್ದವನು
ಕನಸಿಗಳಿ ರಂಗು ತುಂಬಿದವನು

ಕಾಣದ ಸಂತಸವ ಅಸಂಖ್ಯವಾಗಿ
ನನ್ನೆದುರಿಗಿಟ್ಟಿರುವನು

ಗೌರವಿಸುವವನು ಪ್ರೀತಿಸುವವನು
ನಗಿಸುವವನು ತಿಳಿ ಹೇಳುವವನು

ನನ್ನ ನಗುವಿಗಾಗಿ ಕಾದವನು
ಸಾವಿರ ಮಾತುಗಳಿವೆ ಹೇಳಲು
ಮೌನಿ ನಾನು ಅವನೆದುರಿರಲು

By ಅಂಜಲಿ ಶಿದ್ಲಿಂಗ್