ಹಳ್ಳಿಯ ಸೊಗಡಿನಲ್ಲಿ ಗೀತೆ .

ಮಾಗಿ ಚಳಿ


ಮಾಗಿ ಚಳಿಯಾಗ ಕೂಗಿ ಕರೆದರೂ ಬರಲಿಲ್ಲ ಯಾಕ....ನಾ...ಸಾಕ...!

ಕರದಾಗ ಬಂದಾರೆ ಈ ಮಾಗಿ ಚಳಿಯಾಗ..ಗಡಿಗಿಗಿ ನೀರ ತುಂಬೋರ್ಯಾರು....?

ಸಂದ್ಯಾಗ ನಿಂತ್ಕೊಂಡು ಕಾಲ್ಯಾಕ ಗೀಚಾತಿ ಕರೆದರೂ ಬರಲಿಲ್ಲ

ನೀ...ಯಾಕ..!


ಸಂದ್ಯಾಗ ನಿಂತಿಲ್ಲ ಸುಮ್ಮನ್ಯಾಕ ಹೇಳಾತಿ

ಮಾಡ ಕೆಲ್ಸ ಬಿಟ್ಟು ತೆಲಿಯ ತಿನ್ನಾಕ್ ಹತ್ತಿ..ಅತ್ತಿ ಬಂದು ಬೈತಾರ ನನ್ ಕೆಲಸ ಮಾಡಾಕ  ಬಿಡುವಲ್ ನೀ ಯಾಕ.


ನೀರಾಗ ಸಾರಾಗ ಬಾರಾಗ ಕಾರಾಗ

ಕಾಡಾಕ ಹತ್ಯಾಲೋ...ನೀ ಯಾಕ..!


ನಿಂತೆಲಿ ಕೆಟ್ಟಐತಿ ಹೊಟ್ಟ್ಯಾಗ ಪಾಕೀಟು ಎಷ್ಟು ಹೋಗೈತಿ ಮಂಗ್ಯಾನಂಗ ಆಡಕ್ಕ ಹತ್ಯಲ್ಯಕಾ...


ಸುತ್ತಾಲೂ ಮುತ್ತಾಲು ಕತ್ತಾಲು ಆಗ್ಯಾವ ಮಕ್ಕಳು ಮಲಿಗ್ಯಾವ.. ಚುಕ್ಕಿಗಳು ಕಂಡ್ಯಾವ...

ಕೂಗಿ ಕರೆದರೂ ಬರಲಿಲ್ಲ ನೀ...ಯಾಕ...!


ನೀ ಕರೆದಾಗೆಲ್ಲಾ ಬರೋಕ ಬಿಡುವಾಗಿ ಕುಂತಿವ್ನೇನೊ.. ಬೊಗಸೆ ಮನೆಗೆಲಸ,ಅತ್ತೆ ಮಾವಂದಿರ ಸೇವೆ,ಮಕ್ಕಳ ಮಂದಿ ಚಾಕ್ರೀ...ಕಾಯ್ಬೇಕಪಾ ವಸೀ..ಅಡಿಗಡಿಗೆ ಕೆಮ್ಮಿದರೆ

ನಾ ಯಾಕ ಬರಲಿ..ನನ್ ಕೆಲ್ಸ ನೀ ಬಂದು ಮಾಡಲಲ್ಲೊ..


ಮೈಯೆಲ್ಲಾ ಹೂವಾಗಿ ಮನಸೆಲ್ಲಾ ಹಾವಾಗಿ ಕಾಡಾಕ ಹತ್ಯಾದ

ಕರೆದರೂ ಬರಲಿಲ್ಲ ನೀ ಯಾಕ ..!

ಹೆಚ್ಚೇನಾ ಬೇಡಿಲ್ಲ ಹುಚ್ಚಾಗಿ ಕುಂತ್ಯವನಿ

ನನ್ ಮನಸ ತಣಸಾಕ ಬರಲಿಲ್ಲ ಯಾಕಾ...


ಸಂಜಿಕೀ ನೀ ಹಾವಾಗಿ ಕರೆದಾರ ಬರುವಾಕೀ

ನಾನಾದ್ರ  ರಾತ್ರಿಗಿ ಬಿಸಿ ಅಡುಗೆ ಮಾಡೋರ್ಯರು..?

ಮಾಡಕ ಕೆಲ್ಸಿಲ್ಲ ಅದಕ್ಕಾಗಿ ನನ್ನೇನಿಸ್ತಿ

ಸುಮ್ನೆ ಮುಚ್ಕೊಂಡು ಮಲ್ಗಾಕ ಆಗಲ್ಲೇನೊ..

ನಾ ಬರೊ ತನಕ...ಕಾಯ್ಬಾರ್ದೇನೋ...


ಮಾಗಿ ಚಳಿಯಾಗ ಕೂಗಿ ಕರೆದರೂ ಬರಲಿಲ್ಲ ಯಾಕ...ನಾ...ಸಾಕ..!

-By ನಾಗೇಶ್ ಗಡಿಗೇಶ್ವರ.(ಮಸಣದ ಕಾವಲುಗಾರ )